ಈ ಯಂತ್ರವು ರಸ್ತೆ ಬದಿಯಲ್ಲಿ ಸಂಗ್ರಹವಾಗಿರುವ ಧೂಳು, ಮರದ ತುಂಡು, ಕಾಗದ, ಗಾಜು, ಒಣ ಎಲೆ, ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ಮತ್ತು ಲೋಹದ ಬಾಟಲಿಗಳು ಸೇರಿ ಇತರ ತ್ಯಾಜ್ಯವನ್ನು ಹೀರಿಕೊಂಡು ರಸ್ತೆಗಳನ್ನು ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, 12 ಲೀ. ನೀರನ್ನು ಸಂಗ್ರಹಿಸುವ ಸಾಮರ್ಥ್ಯವಿದ್ದು, ಪ್ರೆಶರ್ ಪೈಪ್ ಮೂಲಕ ರಸ್ತೆ ಸ್ವಚ್ಛಗೊಳಿಸಬಹುದಾಗಿದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.