ಐಐಆರ್‌ಎಫ್ ದೇಶದಾದ್ಯಂತ 5,000ಕ್ಕೂ ಅಧಿಕ ಸಂಖ್ಯೆಯ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮೌಲ್ಯಮಾಪನ ಮಾಡುವ, ರಾಷ್ಟ್ರೀಯ ಮಟ್ಟದ ಶ್ರೇಯಾಂಕ ನೀಡುವ ಸಂಸ್ಥೆಯಾಗಿದೆ. ವಿಶ್ವವಿದ್ಯಾಲಯ, ಮಹಾವಿದ್ಯಾಲಯ ಹಾಗೂ ನಿರ್ವಹಣಾ ಸಂಸ್ಥೆಗಳನ್ನು ವೈಜ್ಞಾನಿಕವಾಗಿ ಅವಲೋಕಿಸಿ ಸಂಶೋಧನಾ ಸಾಧನೆ, ಬೋಧಕ ಸಿಬ್ಬಂದಿಯ ಗುಣಮಟ್ಟ, ಉದ್ಯೋಗಾವಕಾಶ, ಉದ್ಯಮಗಳೊಂದಿಗೆ ಸಹಭಾಗಿತ್ವ, ನವೋದ್ಯಮ ಪ್ರೋತ್ಸಾಹ ಚಟುವಟಿಕೆ ಹಾಗೂ ಇತರ ಮಾನದಂಡ ಆಧರಿಸಿ ಈ ಮೌಲ್ಯಮಾಪನ ಮಾಡಲಾಗುತ್ತದೆ.