- 157 ಮರ, 228 ಕೊಂಬೆಗಳು ಧರೆಗೆ
- ರಸ್ತೆಬದಿ ಅವಶೇಷ ತೆರವಿಗೆ ಪಾಲಿಕೆ ಹರಸಾಹಸ
- ನಗರದಲ್ಲಿ ಸರಾಸರಿ 58.2 ಮಿ.ಮೀ. ವರ್ಷಧಾರೆ
ಬೆಂಗಳೂರು: ಮುಂಗಾರು ಆರಂಭಕ್ಕೂ ಮುನ್ನ ರಾಜಧಾನಿ ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆಗೆ ಮತ್ತೆ ಸಮಸ್ಯೆಗಳ ಸರಮಾಲೆ ಮುಂದುವರಿದಿದ್ದು, ಗುರುವಾರ ರಾತ್ರಿ ಬಿರುಸಿನ ವರ್ಷಧಾರೆಗೆ 157 ಮರಗಳು ಹಾಗೂ 228 ಕೊಂಬೆಗಳು ಧರಾಶಾಯಿ ಆಗಿವೆ. ಹಲವು ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಲು ಜಲಾವೃತವಾದವು. ಅಂಡರ್‌ಪಾಸ್/ಮೇಲ್ಸೇತುವೆ ಬಳಿ ಮಳೆನೀರು ಸಂಗ್ರಹಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ಸಂಜೆ ಒಂದು ಗಂಟೆ ಕಾಲ ನಗರದೆಲ್ಲೆಡೆ ಮಳೆ ಸುರಿದ ವೇಳೆ ಹಲವು ರಸ್ತೆಗಳು ಜಲಾವೃತಗೊಂಡವು. ಮತ್ತೆ ರಾತ್ರಿ 11ರ ವೇಳೆಗೆ ಆರಂಭವಾದ ವರ್ಷಧಾರೆ ಸತತ ಎರಡು ಗಂಟೆ ಧಾರಾಕಾರವಾಗಿ ಸುರಿಯಿತು. ಸರಾಸರಿ 58.2 ಮಿ.ಮೀ. ಮಳೆಯಾಗಿದ್ದು, ಕೆಲವೆಡೆ ಬಿರುಗಾಳಿ ಸಹಿತ ಆಲಿಕಲ್ಲು ಬಿದ್ದಿವೆ. ಇದರ ಪರಿಣಾಮ ಕೇಂದ್ರ, ದಕ್ಷಿಣ ಹಾಗೂ ಪಶ್ಚಿಮ ಭಾಗದಲ್ಲಿ ಗಾಳಿಮಳೆಗೆ ಮರ/ಕೊಂಬೆಗಳು ಧರೆಗುರುಳಿವೆ. ರಾತ್ರಿ ಆಗಿದ್ದರಿಂದ ಜನರಿಗೆ ಯಾವುದೇ ತೊಂದರೆ ಉಂಟಾಗಲಿಲ್ಲ. ಆದರೆ, ಮನೆಗಳ ಬಳಿ ಹಾಗೂ ರಸ್ತೆಬದಿ ನಿಲ್ಲಿಸಿದ್ದ ವಾಹನಗಳ ಮೇಲೆ ಮರಗಳು ಬಿದ್ದು ಹಾನಿಯಾಗಿವೆ.
ಕೇಂದ್ರ, ಪಶ್ಚಿಮ ಪಾಲಿಕೆಯಲ್ಲಿ ಹೆಚ್ಚು ಮರ ಧರೆಗೆ:
ಎರಡು ದಿನಗಳ ಬಿಡುವಿನ ಬಳಿಕ ನಗರದೆಲ್ಲೆಡೆ ಮಳೆ ಸುರಿದಿದ್ದರೂ, ಕೇಂದ್ರ ಹಾಗೂ ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲೇ ಅತ್ಯಧಿಕ ಮರ/ಕೊಂಬೆಗಳು ಧರೆಗುರುಳಿವೆ. ಈ ಎರಡೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಕ್ರಮವಾಗಿ 50 ಹಾಗೂ 52 ಮರಗಳು ಧರಾಶಾಯಿ ಆಗಿವೆ. ಸಿ.ವಿ.ರಾಮನ್‌ನಗರ, ಸರ್ವಜ್ಞನಗರ, ವಿಜಯನಗರ, ಆರ್.ಆರ್.ನಗರ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಮರಗಳು ನೆಲಕ್ಕುರುಳಿದ ಬಗ್ಗೆ ವಿವಿಧ ಕಾರ್ಪೋರೇಷನ್‌ಗಳಿಗೆ 500ಕ್ಕೂ ಅಧಿಕ ಸಂಖ್ಯೆಯ ಕರೆಗಳು ಬಂದಿದ್ದವು ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ಲಾಲ್‌ಬಾಗ್, ಕಬ್ಬನ್‌ಪಾಕ್‌ನಲ್ಲೂ ಹಾನಿ:
ನಗರದಲ್ಲಿ ಅತ್ಯಧಿಕ ಪ್ರಮಾಣದ ಮರಗಳ ಸಾಂದ್ರತೆ ಇರುವ ಲಾಲ್‌ಬಾಗ್ ಹಾಗೂ ಕಬ್ಬನ್‌ಪಾರ್ಕ್‌ನಲ್ಲಿ ಹಲವು ಮರಗಳು ಧರೆಗುರುಳಿವೆ. ಇಲ್ಲಿ ಮರಗಳಿಗಿಂತ 50ಕ್ಕೂ ಅಧಿಕ ಕೊಂಬೆಗಳು ಬಿದ್ದಿವೆ. ಕಬ್ಬನ್‌ಪಾರ್ಕ್ ಒಂದು ಬದಿಯಲ್ಲಿನ ಕಬ್ಬಿಣ ಗ್ರಿಲ್ ಮಳೆಯಿಂದ ನೆಲಕ್ಕುರುಳಿದೆ.
ತೆರವು ಕಾರ್ಯ ವಿಳಂಬಕ್ಕೆ ಜನಾಕ್ರೋಶ:
ಮರ/ಕೊಂಬೆಗಳು ನೆಲಕ್ಕರುಳಿದ ಬಳಿಕ ಅವುಗಳನ್ನು ಹೊರಸಾಗಿಸಲು ಪಾಲಿಕೆಯ ಸಿಬ್ಬಂದಿ ಹರಸಾಹಸ ನಡೆಸುತ್ತಿದ್ದಾರೆ. ಮುಖ್ಯರಸ್ತೆ ಸೇರಿ ಕಟ್ಟಡಗಳು ಹಾಗೂ ವಾಹನಗಳ ಮೇಲೆ ಬಿದ್ದಿರುವ ಮರಗಳನ್ನು ತೆರವು ಮಾಡಲಾಗಿದೆ. ಆದರೆ, ಕೊಂಬೆಗಳನ್ನು ರಸ್ತೆಬದಿಯ ುಟ್‌ಪಾತ್ ಮೇಲೆ ಹಾಗೆಯೇ ಬಿಡಲಾಗಿದೆ. ಹಿಂದಿನ ತಿಂಗಳು ನಮ್ಮ ಏರಿಯಾದಲ್ಲಿ ಹಳೆಯ ಮರ ತೆರವುಗೊಳಿಸುವಂತೆ ಪಾಲಿಕೆಗೆ ಹೇಳಿದ್ದೆವು. ಆ ಕೆಲಸ ಆಗಿಯೇ ಇಲ್ಲ. ಈಗ ಆ ಮರದ ಕೊಂಬೆಗಳು ಧರೆಗುರುಳಿವೆ. ಅಪಾಯ ಸ್ವಲ್ಪದರಲ್ಲಿ ತಪ್ಪಿದೆ. ದೂರು ನೀಡಿದ ಬಳಿಕವೂ ಕೆಲಸ ಮಾಡದಿದ್ದರೆ ಹೇಗೆ ಎಂದು ವಿಜಯನಗರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವಶೇಷ ತೆರವಿಗೆ ಕಟ್ಟುನಿಟ್ಟಿನ ಸೂಚನೆ:
ಈ ಹಿಂದೆ ಧರೆಗುರುಳಿರುವ ಮರದ ಅವಶೇಷಗಳನ್ನು ತಕ್ಷಣವೇ ಹೊರಸಾಗಿಸಬೇಕು. ಸಂಬಂಧಿಸಿದ ಡಿಪೋಗಳಿಗೆ ಸಾಗಣೆ ಮಾಡಿ ಮರ ಬಿದ್ಧ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕು. ಕೆಲವೇ ದಿನಗಳಲ್ಲಿ ಬಾಕಿ ಕೆಲಸವನ್ನು ಪೂರ್ಣಗೊಳಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತರು ಎಲ್ಲ ಪಾಲಿಕೆಗಳ ಕಮಿಷನರ್‌ಗಳು, ಮುಖ್ಯ ಅಭಿಯಂತರರು ಹಾಗೂ ಅರಣ್ಯ ವಿಭಾದ ಮುಖ್ಯಸ್ಥರುಗೆ ಸುತತೋಲೆ ಹೊರಡಿಸಿ ಸೂಚನೆ ನೀಡಿದ್ದಾರೆ.
ಪಾಲಿಕೆವಾರು ಮರ, ಕೊಂಬೆ ನೆಲಕ್ಕುರುಳಿದ ವಿವರ:
ಪಾಲಿಕೆ ಮರ ಕೊಂಬೆ ತೆರವು ಬಾಕಿ
ಪಶ್ಚಿಮ 59 138 45/91 14/47
ಒಟ್ಟು 157 228 132/171 25/57
ವಿಧಾನಸಭಾ ಕ್ಷೇತ್ರವಾರು ಮರ/ಕೊಂಬೆ ಬಿದ್ದ ವಿವರ:
ವಾರ್ಡ್‌ವಾರು ಮಳೆ (ಮಿ.ಮೀ.ಗಳಲ್ಲಿ):