ಬೆಂಗಳೂರು: "ತಿತ್ತಿತೈ' ತಂಡವು ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯೊಂದಿಗೆ "ತಿತ್ತಿತೈ ಯಕ್ಷ ಪರ್ವ&2026' ಕಾರ್ಯಕ್ರಮವನ್ನು ಶನಿವಾರ (ಜೂ.20) ರಾತ್ರಿ 9.30ಕ್ಕೆ ಹಮ್ಮಿಕೊಂಡಿದೆ. ಈ ಬಾರಿ ಚೂಡಾಮಣಿ, ವಾಲಿ ವಧೆ ಮತ್ತು ಜಾಂಬವತಿ ಕಲ್ಯಾಣ ಎಂಬ ಮೂರು ಪ್ರಸಂಗಗಳ ಪ್ರದರ್ಶನ ಇರಲಿದೆ. ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್, ಹೆಬ್ರಿ ಗಣೇಶ್, ರಾಮಕೃಷ್ಣ ಹಿಲ್ಲೂರು, ಚಿನ್ಮಯ್ ಭಟ್ ಕಲ್ಲಡ್ಕ, ಸುಜನ್ ಹಾಲಾಡಿ, ಅಕ್ಷಯ್ ಭಟ್ ಬಿದ್ಕಲ್ಕಟ್ಟೆ, ಪ್ರಜ್ವಲ್ ಮುಂಡಾಡಿ, ಅಕ್ಷಯ್ ವಿಟ್ಲ ಮತ್ತಿತರ ಕಲಾವಿದರು ಸಾಥ್ ನೀಡಲಿದ್ದಾರೆ. ಮುಮ್ಮೇಳದಲ್ಲಿ ನೀಲ್ಕೋಡು ಶಂಕರ ಹೆಗಡೆ, ವಿದ್ಯಾಧರ ಜಲವಳ್ಳಿ, ಶಶಿಕಾಂತ್ ಶೆಟ್ಟಿ ಕಾರ್ಕಳ, ರಮೇಶ್ ಭಂಡಾರಿ ಮುರೂರು, ಅಶೋಕ್ ಭಟ್ ಸಿದ್ದಾಪುರ, ಶೈಲೇಶ್ ತೀರ್ಥಹಳ್ಳಿ, ಸುಣ್ಣಂಬಳ ವಿಶ್ವೇಶ್ವರ ಭಟ್, ಪೆಮುರ್ದೆ ಜಯಪ್ರಕಾಶ್ ಶೆಟ್ಟಿ, ಹೆನ್ನಾಬೈಲ್ ವಿಶ್ವನಾಥ್ ಪೂಜಾರಿ, ಪಂಜು ಬಗ್ವಾಡಿ, ಕಾರ್ತಿಕ್ ಚಿಟ್ಟಾಣಿ, ಚಂದ್ರಶೇಖರ ಧರ್ಮಸ್ಥಳ, ಭರತ್ ರಾಜ್ ಪರ್ಕಳ, ಕಿಶನ್ ಅಗ್ಗಿತ್ತಾಯ ಸೇರಿ ವಿವಿಧ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.