

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು : ದೃಷ್ಟಿಹೀನಸ್ನೇಹಿತೆಗೆ ಮನೆಯಲ್ಲಿ ಆಶ್ರಯನೀಡಿ, ಆಕೆ ಬಳಿಯಿದ್ದಲಕ್ಷಾಂತರ ಮೌಲ್ಯದ ಚಿನ್ನಾಭರಣಕಳ್ಳತನ ಮಾಡಿದ್ದ ದಂಪತಿಯನ್ನುರಾಜರಾಜೇಶ್ವರಿ ನಗರ ಪೊಲೀಸರುಬಂಧಿಸಿದ್ದಾರೆ.
ಆರ್.ಆರ್ನಗರ ನಿವಾಸಿಗಳಾದ ಶರ್ಮಿಳಾ (50)ಹಾಗೂ ಗಣೇಶ್ (52) ಬಂಧಿತದಂಪತಿ. ಇವರಿಂದ ಒಟ್ಟು35 ಲಕ್ಷ ರೂ. ಮೌಲ್ಯದ232 ಗ್ರಾಂ ಚಿನ್ನಾಭರಣವಶಕ್ಕೆ ಪಡೆದಿದ್ದಾರೆ.
ಪದ್ಮಜಾರಾವ್(50) ಚಿನ್ನಾಭರಣ ಕಳೆದುಕೊಂಡಮಹಿಳೆ. ಇವರು ಪತಿಯಿಂದದೂರವಾದ ಬಳಿಕ ಬಿಇಎಂಎಲ್ಲೇಔಟ್‌ನಲ್ಲಿರುವ ತನ್ನ ಆತ್ಮೀಯಸ್ನೇಹಿತೆ ಶರ್ಮಿಳಾಳ ಮನೆಯಲ್ಲಿ8 ವರ್ಷಗಳಿಂದ ಆಶ್ರಯಪಡೆದಿದ್ದಳು.
ಸಂತ್ರಸ್ತೆಯಬಳಿ ಅಪಾರ ಸಂಪತ್ತು ಇತ್ತು.ಬ್ಯಾಂಕ್‌ವೊಂದರಲಾಕರ್‌ನಲ್ಲಿ ಇಟ್ಟಿದ್ದ 232ಗ್ರಾಂ ಚಿನ್ನಾಭರಣವನ್ನುಬೇರೆ ಬ್ಯಾಂಕಿನಲ್ಲಿ ಇಡುವಕಾರಣದಿಂದಾಗಿ ಬಿಡಿಸಿ, ತನ್ನಸ್ನೇಹಿತೆ ಶರ್ಮಿಳಾಳ ಮನೆಯಲ್ಲಿ49.50 ಲಕ್ಷ ಹಣದ ಜತೆಗೆಚಿನ್ನಾಭರಣವನ್ನೂ ಇಟ್ಟಿದ್ದರು.
ಸ್ವಲ್ಪದಿನದ ಬಳಿಕ ಬೇರೆ ಬ್ಯಾಂಕಿನಲ್ಲಿಚಿನ್ನಾಭರಣ ಇಡಬೇಕಿದೆ ಚಿನ್ನಾಭರಣಕೊಡುವಂತೆ ಸ್ನೇಹಿತೆಗೆ ಕೇಳಿದಾಗಆಕೆ ಲಾಕರ್ ಕೀ ಕಳೆದಿದೆ ಎಂದಿದ್ದಾಳೆ.ಆಗ ಸಂತ್ರಸ್ತೆಯೇ ನಕಲಿಕೀ ಮಾಡಿಸಿ ಲಾಕರ್ ತೆರೆದು ನೋಡಿದಾಗಅಲ್ಲಿ ಚಿನ್ನವೂ ಇರಲಿಲ್ಲ,ಹಣವೂ ಕಾಣಲಿಲ್ಲ.ಇದರಿಂದ ಆತಂಕಗೊಂಡು,ಶರ್ಮಿಳಾ ಬಳಿ ವಿಚಾರಿಸಿದಾಗನಾವೇ ಚಿನ್ನದಂಗಡಿಯಲ್ಲಿ ಅಡವುಇಟ್ಟಿದ್ದಾಗಿ ಹೇಳಿದ್ದಾಳೆ.ಆಗ ಸಂತ್ರಸ್ತೆ ಪದ್ಮಜಾನೀಡಿದ ದೂರಿನ ಮೇರೆಗೆ ಪೊಲೀಸರುಆರೋಪಿಗಳಿಂದ ಚಿನ್ನಾಭರಣ ವಶಕ್ಕೆಪಡೆದಿದ್ದಾರೆ.
ಸ್ವಂತಉದ್ಯೋಗಕ್ಕೆ ಹಣ ಕೊಡದಿದ್ದಕ್ಕೆಕಳ್ಳತನ..!
ಸಂತ್ತಸ್ತೆಗೆಬಹಳ ವರ್ಷದಿಂದ ಆಶ್ರಯ ನೀಡಿದ್ದರೂಆಕೆಯ ಬಳಿ ಇದ್ದ ಸಂಪತ್ತಿನ ಅರಿವುಆರೋಪಿಗಳಿಗೆ ಗೊತ್ತಿರಲಿಲ್ಲ.ಏಕಾಏಕಿ ಬ್ಯಾಂಕಿನಿಂದಚಿನ್ನಾಭರಣ ಮತ್ತು ಹಣ ಬಿಡಿಸಿಮನೆಗೆ ಬಂದ ಬಳಿಕ ಹಣದಾಸೆಗೆಬಿದ್ದು, ಸ್ವಂತ ಉದ್ಯೋಗಪ್ರಾರಂಭಿಸಲು ಹಣಕಾಸಿನ ಸಹಾಯಕೇಳಿದ್ದಾರೆ. ಅದಕ್ಕೆದೃಷ್ಟಿಹೀನ ಮಹಿಳೆ ಒಪ್ಪಿರಲಿಲ್ಲ.ಇದರಿಂದ ಕೋಪಗೊಂಡಆರೋಪಿಗಳು, ಚಿನ್ನಮತ್ತು ಹಣವನ್ನು ಕದ್ದಿದ್ದಾರೆಎಂದು ಪೊಲೀಸರು ತಿಳಿಸಿದ್ದಾರೆ.
ಮಗಳುಲಂಡನ್‌ನಲ್ಲಿ, ಈಕೆಸ್ನೇಹಿತೆಯ ಮನೆಯಲ್ಲಿ..!
ಪದ್ಮಜಾಅವರಿಗೆ ಓರ್ವಳು ಮಗಳಿದ್ದು,ಆಕೆಯನ್ನು ಮದುವೆ ಮಾಡಿದಬಳಿಕ ತನ್ನ ಗಂಡನೊಂದಿಗೆ ಆಕೆಲಂಡನ್ ಸೇರುತ್ತಾಳೆ. ದೃಷ್ಟಿಸಮಸ್ಯೆಯಿರುವ ಈಕೆ ಒಬ್ಬಳೇ ಇದ್ದಕಾರಣ, ಆತ್ಮಿಯ ಗೆಳತಿಯೇತನ್ನ ಮನೆಯಲ್ಲಿ ಆಶ್ರಯ ನೀಡಿದ್ದಳು.