ಉದ್ಘಾಟನೆ ಅಂಗವಾಗಿ 100 ದಿನಗಳ ವಿಶೇಷ ಕೊಡುಗೆಗಳನ್ನು ಘೋಷಿಸಲಾಗಿದ್ದು, ನ.16ರವರೆಗೆ ಚಿನ್ನದ ಆಭರಣಗಳ ಮೇಕಿಂಗ್ ಚಾರ್ಜ್ ಮೇಲೆ ಶೇ.50 ರಿಯಾಯಿತಿ, ನೈಸರ್ಗಿಕ ವಜ್ರದ ಆಭರಣಗಳಿಗೆ ಪ್ರತಿ ಕ್ಯಾರೆಟ್‌ಗೆ 10 ಸಾವಿರ ರೂ. ರಿಯಾಯಿತಿ, ಅನ್‌ಕಟ್ ಡೈಮಂಡ್, ಅಮೂಲ್ಯ ರತ್ನಾಭರಣಗಳು ಹಾಗೂ ಬೆಳ್ಳಿ ಆಭರಣಗಳ ಮೇಕಿಂಗ್ ಚಾರ್ಜ್ ಮೇಲೆ ಶೇ.25 ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಹಳೆಯ ಚಿನ್ನದ ವಿನಿಮಯಕ್ಕೆ ಪ್ರತಿ ಗ್ರಾಂಗೆ ಹೆಚ್ಚುವರಿ 100 ರೂ. ಹಾಗೂ ಪ್ರತಿಯೊಬ್ಬ ಗ್ರಾಹಕರಿಗೂ ಉಚಿತ ಉಡುಗೊರೆ ನೀಡಲಾಗುತ್ತದೆ. ಇದೇ ವೇಳೆ ಶಾಪ್ ವಿನ್ ಲಕ್ಕಿ ಡ್ರಾ ಯೋಜನೆಯನ್ನೂ ಘೋಷಿಸಲಾಗಿದ್ದು, ಖರೀದಿ ಮಾಡುವ ಗ್ರಾಹಕರಿಗೆ ಲಕ್ಕಿ ಕೂಪನ್ ನೀಡಲಾಗುತ್ತದೆ. ಇದರಡಿ 15 ವಿಜೇತರಿಗೆ ಟಿವಿ, ಫ್ರಿಡ್ಜ್ ಅಥವಾ ವಾಷಿಂಗ್ ಮಷಿನ್, 10 ವಿಜೇತರಿಗೆ ಸ್ಕೂಟರ್ ಹಾಗೂ ಶೋರೂಮ್‌ಗೆ ಭೇಟಿ ನೀಡುವ ಮೂವರು ಅದೃಷ್ಟಶಾಲಿ ಸಂದರ್ಶಕರಿಗೆ ಸ್ಮಾರ್ಟ್‌ಫೋನ್ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ. ನೂತನ ಶಾಖೆ ಓಲ್ಡ್ ಮದ್ರಾಸ್ ರಸ್ತೆ, ಕೃಷ್ಣರಾಜಪುರಂ ಎಕ್ಸ್ಟೆನ್ಶನ್, ಕೆ.ಆರ್.ಪುರಂನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಸಂಸ್ಥೆ ತಿಳಿಸಿದೆ.