

ಪ್ರಮುಖ ಮುಖ್ಯಾಂಶಗಳು
ಕೇವಲ 15 ನಿಮಿಷದಲ್ಲಿ ಎ್ಐಆರ್!
ವೈಟ್ಫೀಲ್ಡ್ ಸಮೀಪದ ಬೆಟ್ಟದಾಸಪುರದಲ್ಲಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆ ನಸ್ರೀನಾ ಬಿಲಾಲ್ ಎಂಬಾಕೆಯನ್ನು ಗಡಿಪಾರು ಮಾಡುವ ಸಂಬಂಧ ತನಿಖಾಧಿಕಾರಿಯು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎ್ಆರ್ಆರ್ಒ) ಜು. 22ರ ರಾತ್ರಿ 11.30 ಕ್ಕೆ ಪತ್ರ ಬರೆದಿದ್ದರು. ಆದರೆ, ಈ ಪತ್ರ ರವಾನೆಯಾದ ಕೇವಲ 15 ನಿಮಿಷಗಳಲ್ಲಿ, ಅಂದರೆ ರಾತ್ರಿ 11:45 ಕ್ಕೆ, ಅದೇ ಅಕ್ರಮ ವಲಸಿಗ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ನಾಗೇಂದರ ಅವರ ವಿರುದ್ಧ ಎ್ಐಆರ್ ದಾಖಲಿಸಲಾಗಿತ್ತು. ತನಿಖಾಧಿಕಾರಿಯು ರಾತ್ರಿ 11.30ರ ಸುಮಾರಿಗೆ ಮಹಿಳೆಯ ದೇಹದ ಮೇಲೆ ಯಾವುದೇ ರೀತಿಯ ಗಾಯ ಅಥವಾ ಹಲ್ಲೆಯ ಕುರಿತು ದಾಖಲಿಸಿರಲಿಲ್ಲ. ಹೀಗಿದ್ದರೂ, ಕೇವಲ 15 ನಿಮಿಷಗಳ ಅಂತರದಲ್ಲಿ ಯಾವುದೇ ಪ್ರಾಥಮಿಕ ತನಿಖೆ ನಡೆಸದೆ, ಹಲ್ಲೆ ಆರೋಪದಲ್ಲಿ ಎಫ್ಐಆರ್ ದಾಖಲಿಸಿಕೊಂಡಿರುವುದು ತೀವ್ರ ಸಂಶಯಾಸ್ಪದವಾಗಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.