ಸ್ಟಿಂಗ್​ ಆಪರೇಷನ್​ ಪ್ರಕರಣದಲ್ಲಿ ನಿರಪರಾಧಿಗಳನ್ನು ಸಿಕ್ಕಿ ಹಾಕಿಸುವ ಪ್ರಯತ್ನ: ಕೆ.ಎನ್​. ರಾಜಣ್ಣ ಸ್ಫೋಟಕ ಹೇಳಿಕೆ! Sting Operation

Sting Operation
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಕೆ.ಎನ್​. ರಾಜಣ್ಣ
Published on: 

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್​ ಪ್ರಕರಣವು ( Sting Operation ) ಇಡೀ ಕರ್ನಾಟಕಕ್ಕೆ ದೊಡ್ಡ ಕಳಂಕ ತಂದಿಟ್ಟಿದೆ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ತೀವ್ರ ಬೇಸರ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ.

ಶಾಸಕರ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಣ್ಣ ಅವರು, ಈ ಸ್ಟಿಂಗ್ ಪರಿಣಾಮಗಳು ಪಕ್ಷದ ಮೇಲೆ ಯಾವ ರೀತಿಯ ದುಷ್ಪರಿಣಾಮ ಬೀರುತ್ತಿವೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಹೈಕಮಾಂಡ್‌ ನಾಯಕ ರಾಹುಲ್ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.

Also Read
ಡಿಕೆಶಿ ಏನೇ ನಾಟಕ ಮಾಡಿದ್ರೂ ಎಂಎಲ್‍ಸಿ ಚುನಾವಣೆ ಗೆಲ್ಲಲು ಆಗ್ಲಿಲ್ಲ! ಜನರೇ ಪಾಠ ಕಲಿಸಲಿದ್ದಾರೆ: ಬಿ.ವೈ. ವಿಜಯೇಂದ್ರ
Sting Operation

ಈ ಸ್ಟಿಂಗ್​ ಆಪರೇಷನ್​ ಪ್ರಕರಣದಿಂದಾಗಿ ಸಾರ್ವಜನಿಕರಲ್ಲಿ ಭಾರೀ ಗೊಂದಲ ನಿರ್ಮಾಣವಾಗಿದ್ದು, ರಾಜ್ಯದ ರಾಜಕೀಯ ವರ್ಚಸ್ಸಿಗೆ ದೊಡ್ಡ ಪೆಟ್ಟು ಬಿದ್ದಿದೆ ಎಂದು ರಾಜಣ್ಣ ಅವರು ಇದೇ ಸಂದರ್ಭದಲ್ಲಿ ಬೇಸರ ಹೊರಹಾಕಿದರು.

ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆಯ ಅಗತ್ಯವನ್ನು ಪ್ರತಿಪಾದಿಸಿದ ರಾಜಣ್ಣ, ತನಿಖೆಯು ಉನ್ನತ ಮಟ್ಟದ್ದಾಗಲಿ ಅಥವಾ ಕೆಳಮಟ್ಟದ್ದಾಗಲಿ ಒಟ್ಟಿನಲ್ಲಿ ಸೂಕ್ತವಾದ ತನಿಖೆ ನಡೆದು ಅಸಲಿ ಸತ್ಯ ಹೊರಬರಬೇಕಿದೆ ಎಂದರು. ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ಯಾರೂ ಮಾಡಲು ಧೈರ್ಯ ಮಾಡದಂತೆ ತನಿಖೆಯಾಗಬೇಕು. ಇಲ್ಲದಿದ್ದರೆ ಮುಂದೆಲ್ಲಾ ಇಂತಹ ಸ್ಟಿಂಗ್ ವಿಷಯದಲ್ಲಿ 'ಕರ್ನಾಟಕ ಮಾಡೆಲ್' ಎಂದು ಹೆಸರಾಗಿ, ಇಡೀ ರಾಜ್ಯವೇ ಅಪಕೀರ್ತಿಗೆ ಒಳಗಾಗುವ ಅಪಾಯವಿದೆ. ಅಭಿವೃದ್ಧೀ ವಿಚಾರದಲ್ಲಿ ಗುಜರಾತ್​ ಅನ್ನು ಮಾಡೆಲ್​ ಅಂತೀವಿ, ಅದೇ ರೀತಿ ಸ್ಟಿಂಗ್​ ಅಂತಾ ಬಂದಾಗ ಕರ್ನಾಟಕ ಮಾಡೆಲ್​ ಎನ್ನುವ ಮಟ್ಟಕ್ಕೆ ಇದು ಹೋಗುತ್ತದೆ. ಇಂತಹ ದುಷ್ಕೃತ್ಯಗಳಿಂದ ಅಮಾಯಕ ಹಾಗೂ ನಿರಪರಾಧಿಗಳನ್ನು ಸಿಕ್ಕಿಹಾಕಿಸುವ ಕೆಲಸವಾಗುತ್ತಿದ್ದು, ಇದಕ್ಕೆ ತಕ್ಷಣವೇ ಕಡಿವಾಣ ಬೀಳಬೇಕಿದೆ ಎಂದು ರಾಜಣ್ಣ ಒತ್ತಾಯಿಸಿದರು.

ಇದೇ ವೇಳೆ ಮುಂಬರುವ ಚುನಾವಣೆಗಳ ಮೇಲಿನ ಪರಿಣಾಮಗಳ ಕುರಿತು ಮಾತನಾಡಿದ ಕೆ.ಎನ್. ರಾಜಣ್ಣ, ಸಿದ್ದರಾಮಯ್ಯನವರು ತಾನು ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿರುವುದು ಪಕ್ಷ ಮತ್ತು ಜನರ ಮೇಲೆ ತೀವ್ರವಾದ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟರು.

Also Read
ಅಮ್ಮಾ ಮನೆಗೆ ಕರ್ಕೊಂಡು ಹೋಗು! ಕೊನೆಗೂ 3 ವರ್ಷದ ಕಂದನ ಕಣ್ಣೀರಿಗೆ ಸಿಕ್ಕಿತಾ ನ್ಯಾಯ? | Child Custody
Sting Operation

ಈಗಾಗಲೇ ನಡೆದಿರುವ ವಿಧಾನ ಪರಿಷತ್ ಚುನಾವಣೆಯ ಮೇಲೆಯೂ ಇದರ ದುಷ್ಪರಿಣಾಮ ಬಿದ್ದಿದೆ ಎಂಬುದನ್ನು ರಾಜಣ್ಣ ಅವರು ಒಪ್ಪಿಕೊಂಡರು. ಪ್ರಸ್ತುತ ರಾಜಕೀಯ ವಿದ್ಯಮಾನಗಳು ಮತ್ತು ನಾಯಕರ ನಿರ್ಧಾರಗಳು ಪಕ್ಷದ ಭವಿಷ್ಯದ ಮೇಲೆ ಬೀರುತ್ತಿರುವ ಸವಾಲುಗಳನ್ನು ರಾಜಣ್ಣ ಅವರ ಹೇಳಿಕೆಯು ಸ್ಪಷ್ಟವಾಗಿ ಎತ್ತಿಹಿಡಿದಿದೆ, (ಏಜೆನ್ಸೀಸ್​).