ಅಮ್ಮಾ ಮನೆಗೆ ಕರ್ಕೊಂಡು ಹೋಗು! ಕೊನೆಗೂ 3 ವರ್ಷದ ಕಂದನ ಕಣ್ಣೀರಿಗೆ ಸಿಕ್ಕಿತಾ ನ್ಯಾಯ? | Child Custody

Telangana Child Custody
ತೆಲಂಗಾಣದಲ್ಲಿ 3 ವರ್ಷದ ಮಗು ಪೋಷಕರನ್ನು ಭಾವುಕವಾಗಿ ಅಪ್ಪಿಕೊಂಡ ಕ್ಷಣ
Published on: 

Telangana High Court child custody: ‘ಅಮ್ಮಾ, ನನ್ನ ಮನೆಗೆ ಕರ್ಕೊಂಡು ಹೋಗು... ನನಗೆ ಭಯ ಆಗ್ತಿದೆ!’ ಎಂದು ಕರೀಂನಗರದ ಸರ್ಕಾರಿ ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಕಣ್ಣೀರಿಡುತ್ತಿದ್ದ 3 ವರ್ಷದ ಮಗು , ಕೊನೆಗೂ ತನ್ನನ್ನು ಪ್ರೀತಿಯಿಂದ ಸಾಕಿ ಬೆಳೆಸಿದ ಪೋಷಕರ ಮಡಿಲು ಸೇರಿದ್ದಾನೆ.

ತೆಲಂಗಾಣ ಹೈಕೋರ್ಟ್ ಹಾಗೂ ಜಗತಿಯಾಲ ಜಿಲ್ಲಾಡಳಿತದ ಮಧ್ಯಪ್ರವೇಶದಿಂದ ಈ ಭಾವುಕ ಕಸ್ಟಡಿ ಗೊಂದಲಕ್ಕೆ ಸುಖಾಂತ್ಯ ಸಿಕ್ಕಿದೆ. ರುದ್ರ ಮಹೇಶ್ 5 ದಿನದ ಮಗುವಿದ್ದಾಗ ಹಿಂದೂ ಸಂಪ್ರದಾಯದಂತೆ ದತ್ತು ಪಡೆದು 3 ವರ್ಷ ಸಾಕಿ ಬೆಳೆಸಿದ್ದ ಕಸಾರಪು ಶ್ರೀನಿವಾಸ್ ಮತ್ತು ಸರಿತಾ ದಂಪತಿಯಿಂದ, ದತ್ತು ಪ್ರಕ್ರಿಯೆಯ ಕಾನೂನು ಮಾನ್ಯತೆಯ ನೆಪವೊಡ್ಡಿ ಅಧಿಕಾರಿಗಳು ಮಗುವನ್ನು ಬೇರ್ಪಡಿಸಿ ಕರೀಂನಗರದ ಸರ್ಕಾರಿ ಬಾಲಮಂದಿರಕ್ಕೆ ಸೇರಿಸಿದ್ದರು.

ಅಮ್ಮಾ ಮನೆಗೆ ಕರ್ಕೊಂಡು ಹೋಗು

ಬಾಲಮಂದಿರದಲ್ಲಿದ್ದ ಮಗು ಸರಿತಾ ಅವರನ್ನು ನೋಡಿ ‘ಅಮ್ಮಾ ಮನೆಗೆ ಕರ್ಕೊಂಡು ಹೋಗು’ ಎಂದು ಕಣ್ಣೀರಿಡುತ್ತಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಜನರ ಮನ ಕಲಕಿತ್ತು. ಮಗುವಿನ ಪಾಲನೆಗೆ ಹೈಕೋರ್ಟ್ ಅಕ್ಟೋಬರ್ 16ರಂದೇ ಆದೇಶ ನೀಡಿದ್ದರೂ, ಚೈಲ್ಡ್ ವೆಲ್ಫೇರ್ ಕಮಿಟಿ (CWC) ಹಸ್ತಾಂತರಕ್ಕೆ ವಿಳಂಬ ಮಾಡಿದೆ ಎಂದು ಆರೋಪಿಸಿ ದಂಪತಿ ನವೆಂಬರ್ 2ರ 'ಪ್ರಜಾವಾಣಿ' ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ: ಆಂಧ್ರದ HPCL ಪ್ಲಾಂಟ್‌ನಲ್ಲಿ ಅಗ್ನಿ ಅವಘಡ: ಬೆಂಕಿಯ ಕೆನ್ನಾಲಿಗೆ ಬೆಚ್ಚಿಬಿದ್ದ ಸ್ಥಳೀಯರು! | Visakhapatnam HPCL Fire

ಮರಳಿ ದಂಪತಿ ಮಡಿಲು ಸೇರಿದ ಮಗು

ಘಟನೆಗೆ ತಕ್ಷಣ ಸ್ಪಂದಿಸಿದ ಜಗತಿಯಾಲ ಜಿಲ್ಲಾಧಿಕಾರಿ ಬಿ. ಸತ್ಯಪ್ರಸಾದ್, ಹೈಕೋರ್ಟ್ ಆದೇಶದಂತೆ ನವೆಂಬರ್ 2ರ ಸೋಮವಾರ ಸಂಜೆಯೇ ರುದ್ರ ಮಹೇಶ್‌ನನ್ನು ಶ್ರೀನಿವಾಸ್-ಸರಿತಾ ದಂಪತಿಗೆ ಹಸ್ತಾಂತರಿಸಿದರು. ವಾರಗಳಿಂದ ಆತಂಕದಲ್ಲಿದ್ದ ದಂಪತಿಗೆ ಮಗು ಮರಳಿ ಸಿಕ್ಕಿದ್ದು ಅಪಾರ ನೆಮ್ಮದಿ ತಂದಿದ್ದು, ತಾಯಿಯ ಅಪ್ಪುಗೆಗಾಗಿ ಕಾಯುತ್ತಿದ್ದ ಕಂದನಿಗೂ ಕೊನೆಗೂ ತನ್ನ ಮನೆಗೆ ಮರಳಿದ ಸಂತಸ ಸಿಕ್ಕಿದೆ. (ಏಜೆನ್ಸೀಸ್​)