ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಶ್ಚಿಮ ಟ್ಟಗಳು, ಅರಣ್ಯ ಪ್ರದೇಶ ಸೇರಿ ಇತರೆ ಜಾಗಗಳಲ್ಲಿ 39 ಚಾರಣ ಸ್ಥಳಗಳನ್ನು ಗುರುತಿಸಿದೆ. ಜನವರಿಯಿಂದ ಈಚೆಗೆ ಕೊಡಗಿನ ತಡಿಯಾಂಡ ಮೋಳ್, ಚಿಕ್ಕಮಗಳೂರಿನ ಮಾಣಿಕ್ಯಧಾರ ಜಲಪಾತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿವಗಂಗೆ ಬೆಟ್ಟದಲ್ಲಿ ಚಾರಣಿಕ್ಕೆ ಹೋದವರು ಕಾಣೆಯಾಗಿದ್ದ, ಮೃತಪಟ್ಟಿದ್ದ ಪ್ರಕರಣಗಳು ಸಂಭವಿಸಿದ್ದವು. ಇದರಿಂದಾಗಿ ಚಾರಣಿಗರ ಸುರಕ್ಷತೆಗೆ ಕ್ರಮವಹಿಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.