ನಿರುದ್ಯೋಗ ನಿವಾರಣೆಗೆ ಕೌಶಲ ತರಬೇತಿ ಅಗತ್ಯ

ನಗರದಲ್ಲಿ ಮಂಗಳವಾರ ನಡೆದ ಕೈಗಾರಿಕೆಗಳ ಮುಖ್ಯಸ್ಥರ ಸಮಾವೇಶವನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಉದ್ಘಾಟಿಸಿದರು.
ನಗರದಲ್ಲಿ ಮಂಗಳವಾರ ನಡೆದ ಕೈಗಾರಿಕೆಗಳ ಮುಖ್ಯಸ್ಥರ ಸಮಾವೇಶವನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಉದ್ಘಾಟಿಸಿದರು.
Published on
ಬೆಂಗಳೂರು: ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಿದರೆ ಉದ್ಯೋಗದ ಅವಕಾಶಗಳು ಸುಲಭವಾಗಿ ಸಿಗುತ್ತದೆ. ಇದರಿಂದ ನಿರುದ್ಯೋಗ ಸಮಸ್ಯೆ ಹೋಗಲಾಡಿಸಬಹುದು ಎಂದು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಹೇಳಿದ್ದಾರೆ.
ನಗರದ ಎಸ್​.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕೈಗಾರಿಕೆಗಳ ಮುಖ್ಯಸ್ಥರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ರಾಜ್ಯವು ಕೈಗಾರಿಕ ಹಬ್​ ಆಗಿ ಅಭಿವೃದ್ಧಿ ಹೊಂದುತ್ತಿದ್ದು, ಇದಕ್ಕೆ ತಕ್ಕ ಮಾನವ ಸಂಪನ್ಮೂಲ ಒದಗಿಸಬೇಕು ಎಂದರು.
ಕೈಗಾರಿಕೆ, ಐಟಿ&ಬಿಟಿ ವಿಚಾರದಲ್ಲಿ ಕರ್ನಾಟಕವು ನಾಯಕತ್ವ ವಹಿಸಿಕೊಂಡಿದೆ. ಬೆಂಗಳೂರಿನಲ್ಲಿ ಐಟಿ&ಬಿಟಿ ಕ್ರಾಂತಿ ಆಗಿದ್ದು, ನಮ್ಮಲ್ಲಿನ ಇಂಜಿನಿಯರ್​ಗಳ ಮೇಲೆ ಹಲವು ದೇಶಗಳು ಅವಲಂಬನೆಯಾಗಿವೆ. ತಂತ್ರಜ್ಞಾನ ವೇಗಕ್ಕೆ ತಕ್ಕ ಕೌಶಲಗಳು ಸೃಷ್ಟಿಯಾಗಬೇಕು. ರಾಜ್ಯದಲ್ಲಿ 180 ಇಂಜಿನಿಯರ್​, 72 ವೈದ್ಯಕಿಯ ಸೇರಿ ಡಿಪ್ಲೊಮಾ ಕಾಲೇಜುಗಳು ಇವೆ. ಪದವಿ ಪಡೆದುಕೊಂಡವರಿಗೆಲ್ಲ ಕೆಲಸ ಸಿಕ್ಕಿಲ್ಲ. ಆದರೆ ಟ್ಯಾಲೆಂಟ್​ ಹಬ್​ ಆಗಿ ರೂಪುಗಳೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.
ಇಂಜಿನಿಯರ್​, ವೈದ್ಯಕಿಯ ಪದವಿ ಪಡೆದುಕೊಳ್ಳಲು ಹೊರ ರಾಜ್ಯ, ದೇಶಗಳಿಂದಲೂ ಕರ್ನಾಟಕಕ್ಕೆ ಬರುತ್ತಿದ್ದಾರೆ. ಲಾಂತರ ಮಂದಿ ಇಂಜಿನಿಯರ್​ಗಳು ಹೊರ ಹೊಮ್ಮುತ್ತಿದ್ದು, ಸ್ಥಳಿಯವಾಗಿ ಶೇ.20ರಷ್ಟು ಮಂದಿ ಮಾತ್ರ ಉದ್ಯೋಗಕ್ಕೆ ಸೇರಿಕೊಳ್ಳುತ್ತಿದ್ದಾರೆ. ಇದರ ಕೊರತೆ ನಿವಾರಣೆಗೆ ಸರ್ಕಾರಗಳು ಮುಂದಾಗಿದ್ದು, ಕೈಗಾರಿಕೆಗಳ ಸಹಕಾರದ ಅಗತ್ಯವಿದೆ ಎಂದು ತಿಳಿಸಿದರು.
ವೃತ್ತಿಗೆ ತಕ್ಕ ತರಬೇತಿ ಅಗತ್ಯ:
ಎಫ್​ಕೆಸಿಸಿಐ ಅಧ್ಯೆ ಉಮಾ ರೆಡ್ಡಿ ಮಾತನಾಡಿ, ಕಾಲೇಜು ಹಂತದಲ್ಲೇ ಕೌಶಲ ತರಬೇತಿ ನೀಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಶಿಕ್ಷಣ ಸಂಸ್ಥೆಗಳು ಕಂಪನಿಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದೆ ಆದರೆ ಜಾಗತಿಕ ಪ್ರತಿಭಾ ಸಮೀಕರಣ ಕಂಡುಕೊಳ್ಳಬಹುದು ಎಂದರು.
ತಂತ್ರಜ್ಞಾನ ಬೆಯುತ್ತಿರುವ ವೇಗಕ್ಕೆ ತಕ್ಕಂತೆ ಹೊಸ ಮಾದರಿಯ ಉದ್ಯೋಗಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ದಿನಗಳಲ್ಲಿ ಯುವಕರು ಪಡೆದುಕೊಳ್ಳುತ್ತಿರುವ ಶಿಕ್ಷಣಕ್ಕೂ ಸೇರಿಕೊಳ್ಳುತ್ತಿರುವ ಉದ್ಯೋಗಕ್ಕೂ ಸಂಬಂಧವಿಲ್ಲದಂತಾಗಿದೆ. ಇದಕ್ಕೆಲ್ಲ ಕೌಶಲ ಕೊರತೆಯೇ ಕಾರಣವಾಗಿದೆ. ಇದರಿಂದಾಗಿ ಶಿಕ್ಷಣ, ಕೌಶಲ ಮತ್ತು ಉದ್ಯೋಗವನ್ನು ಬೆಸೆಯುವ ಕ್ರಮ ಆಗಬೇಕು ಎಂದು ಹೇಳಿದರು.
ಉದ್ಯೋಗ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆ ವೇಗವಾಗಿದ್ದು, ಕೃತಕ ಬುದ್ಧಿಮತ್ತೆ, ಸ್ವಯಂ ಚಾಲನೆ, ರೋಬಾಟಿಕ್​, ಡಿಜಿಟಲೀಕರಣ, ಸುಧಾರಿತ ಉತ್ಪಾದನೆ ಮತ್ತು ಹೊಸ ಉದ್ಯಮ ಮಾದರಿಗಳು ಉದ್ಯೋಗಗಳ ಸ್ವರೂಪವನ್ನು ಬದಲಾಯಿಸುತ್ತಿವೆ. ಇದಕ್ಕೆ ತಕ್ಕ ವೃತ್ತಿ ತರಬೇತಿ ಅಗತ್ಯವಿದೆ ಎಂದು ತಿಳಿಸಿದರು.
ಎಫ್​ಕೆಸಿಸಿಐ ಕೌಶಲ ಅಭಿವೃದ್ಧಿ ಸಮಿತಿ ಅಧ್ಯೆ ಬಿ.ಎ. ತೇಜಸ್ವಿ, ಉಪಾಧ್ಯಕ್ಷರಾದ ಟಿ. ಶ್ರೀರಾಮ ಪ್ರಸಾದ, ಬಿಪಿ. ಶಶಿಧರ್​, ಎಂ.ಜಿ. ಬಾಲಕೃಷ್ಣ, ಸಲಹೆಗಾರ ಡಾ. ಜೇಕಬ್​ ಕ್ರಾಸ್ಟಾ ಇದ್ದರು.
ಕೋಟ್​:
ಇವತ್ತಿನ ಕೌಶಲ ಮುಂದಿನ ಕರ್ನಾಟಕಕ್ಕೆ ನಾಂದಿ ಆಗಲಿವೆ. ಕೈಗಾರಿಕೆಗಳು ಎಂದರೆ ಉತ್ಪಾದನೆ ಅಥವಾ ಉದ್ಯೋಗ ನೀಡಲು ಅಷ್ಟೇ ಸಿಮೀತವಾಗಿರುವುದಿಲ್ಲ. ನವ ಉದ್ಯಮಿಗಳನ್ನು ಹುಟ್ಟಿ ಹಾಕುವ ಕೈಗಾರಿಕೆಗಳು.
- ಶಿವಕಾಂತಮ್ಮ ನಾಯಕ್​, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಅಧ್ಯೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net