2023ರಲ್ಲಿ ಕಾರಂತ ಲೇಔಟ್ ನಿರ್ಮಾಣ ವೆಚ್ಚ ಅಧಿಕಗೊಂಡ ಕಾರಣ ಸೈಟ್‌ಗಳ ದರವನ್ನು ಪ್ರತಿ ಚದರ ಅಡಿಗೆ 4,900 ರೂ.ಗೆ ಹೆಚ್ಚಿಸಲಾಗಿತ್ತು. ಇದಕ್ಕೆ ನಾಗರಿಕರಿಂದ ಆಕ್ಷೇಪ ವ್ಯಕ್ತವಾದರೂ, ಪ್ರಾಧಿಕಾರ ತನ್ನ ನಿಲುವು ಬದಲಿಸಲಿಲ್ಲ. ಪ್ರಾಧಿಕಾರಕ್ಕೆ ಅತ್ಯಧಿಕ ಹೊರೆ ತಗಲುತ್ತಿರುವ ಕಾರಣ ದರ ಏರಿಕೆ ಅನಿವಾರ್ಯ ಎಂದು ಪ್ರತಿಪಾದಿಸಿತ್ತು. ಮೂರು ವರ್ಷಗಳ ಬಳಿಕವೂ ಸೈಟ್ ಹಂಚಿಕೆ ಮಾಡದ ಬಿಡಿಎ, ಮತ್ತೆ ಈಗ ಪ್ರತಿ ಚದರ ಅಡಿಗೆ 1,100 ರೂ. ಹೆಚ್ಚಿಸಿ ನಿವೇಶನಾಕಾಂಕ್ಷಿಗಳಿಗೆ ಬರೆ ಎಳೆದಿದೆ.