ಇಸ್ರೋದಿಂದ ರಾಕೆಟ್​ ಉಡಾವಣೆ ಯಶಸ್ವಿ

ಸಚಿವ ಡಾ. ಅಜಯ್​ ಧರಂ ಸಿಂಗ್​ ಅವರು ನಗರದಲ್ಲಿ ಇಸ್ರೋ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಡಾ.ವಿ.ನಾರಾಯಣನ್​ ಅವರನ್ನು ಅಭಿನಂದಿಸಿದರು.
ಸಚಿವ ಡಾ. ಅಜಯ್​ ಧರಂ ಸಿಂಗ್​ ಅವರು ನಗರದಲ್ಲಿ ಇಸ್ರೋ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಡಾ.ವಿ.ನಾರಾಯಣನ್​ ಅವರನ್ನು ಅಭಿನಂದಿಸಿದರು.
Published on
ಬೆಂಗಳೂರು: ಇಸ್ರೋ ಸಂಸ್ಥೆಯಿಂದ ಜಿಎಸ್​ಎಲ್​ವಿ-ಎಫ್ ​17/ಇಒಎಸ್​-05 ರಾಕೆಟ್​ ಉಡಾವಣೆ ಯಶಸ್ವಿಯಾಗಿದ್ದು, ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ್​ ಧರಂ ಸಿಂಗ್​ ಅವರು ನಗರದಲ್ಲಿ ಇಸ್ರೋ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಡಾ.ವಿ.ನಾರಾಯಣನ್​ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.
ಸಚಿವ ಡಾ.ಅಜಯ್​ ಧರಂ ಸಿಂಗ್​ ಮಾತನಾಡಿ, ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ ಎಂಬುದಕ್ಕೆ ಇಸ್ರೋ ಸಾಧನೆ ಸಾಯಾಗಿದೆ. ವಿಜ್ಞಾನಿಗಳು, ಇಂಜಿನಿಯರ್​ಗಳು ಮತ್ತು ತಾಂತ್ರಿಕ ತಂಡದ ಶ್ರಮದಿಂದ ಇಂತಹ ಸಾಧನೆ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲೂ ನಡೆಯುವ ಇಂತಹ ಸಾಧನೆಗೆ ಸಹಕಾರ ನೀಡಲಾಗುವುದು ಎಂದರು.
ಸಂಸ್ಥೆಯು ದೇಶದ ವೈಜ್ಞಾನಿಕ ಹಾಗೂ ತಾಂತ್ರಿಕ ಸಾಮರ್ಥ್ಯಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. ಸಂಸ್ಥೆಯ ಸಾಧನೆ ದೇಶ, ರಾಜ್ಯದ ಹಮ್ಮೆ. ಬಾಹ್ಯಾಕಾಶ ವಿಜ್ಞಾನ, ಸಂಶೋಧನೆ, ಸ್ಪೇಸ್​ ಟೆಕ್​, ಡೀಪ್​ ಟೆಕ್​ ಮತ್ತು ಹೊಸ ತಂತ್ರಜ್ಞಾನಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಹಕಾರ ನೀಡಲು ಸದಾ ಸಿದ್ಧವಾಗಿದೆ ಎಂದು ಹೇಳಿದರು.
ಕರ್ನಾಟಕವು ಇಸ್ರೋದ ಐತಿಹಾಸಿಕ ತವರು. ಭಾರತದ ಮುಂದಿನ ಸ್ಪೇಸ್​ ಟೆಕ್​, ದೀಪ್​ ಟೆಕ್​ ಬೆಳವಣಿಗೆಯಲ್ಲಿ ರಾಜ್ಯ ಮುಂಚೂಣಿಯಲ್ಲಿ ಇರಬೇಕು. ಈ ದಿಸೆಯಲ್ಲಿ ಇಸ್ರೋದ ಮಾರ್ಗದರ್ಶನ ಮತ್ತು ಸಹಕಾರ ಅತ್ಯಂತ ಮಹತ್ವದ್ದು, ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ ಸಂಸ್ಥೆಗೆ ಬಲ ತುಂಬುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು ಇಸ್ರೋ ಅಧ್ಯಕ್ಷ ಡಾ.ವಿ.ನಾರಾಯಣನ್​ ಅವರಿಗೆ ದೂರವಾಣಿ ಕರೆ ಮಾಡಿ, ಅಭಿನಂದನೆ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net