ಕೆಲವು ಕಾರ್ಯಕ್ರಮದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಮಳೆನಡಿಗೆಯಿಂದಾಗಿ ವನ್ಯಜಿವಿಗಳಿಗೆ ತೊಂದರೆಯಾಗುತ್ತದೆ, ಗದ್ದೆಗಳಲ್ಲಿನ ಕ್ರಿಮಿಕೀಟಗಳು ಹಾಗೂ ಕಪ್ಪೆಗಳ ಮೊಟ್ಟೆಗಳಿಗೆ ಹಾನಿಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಯಾವ ರೀತಿಯ ತೊಂದರೆಯೂ ನಮ್ಮ ಕಾರ್ಯಕ್ರಮದಿಂದ ಆಗುವುದಿಲ್ಲ. ಪ್ಲಾಸ್ಟಿಕ್ಮುಕ್ತ ಹಾಗೂ ಪರಿಸರ ಸ್ನೇಹಿ ಕಾರ್ಯಕ್ರಮ ಇದಾಗಿದ್ದು, ಪ್ರಕೃತಿ ಕಾಳಜಿಯ ಈ ಕಾರ್ಯಕ್ರಮವನ್ನು ತೇಜೋವಧೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.