ಮಾಸ್ಟರ್ಸ್​​ ಅಥ್ಲೆಟಿಕ್ಸ್​ನಲ್ಲಿ ಬೆಂಗಳೂರಿನ ಪುಷ್ಪಲತಾಗೆ ಮೂರು ಪದಕ

ಮಾಸ್ಟರ್ಸ್​​ ಅಥ್ಲೆಟಿಕ್ಸ್​ನಲ್ಲಿ ಬೆಂಗಳೂರಿನ ಪುಷ್ಪಲತಾಗೆ ಮೂರು ಪದಕ
ಮಾಸ್ಟರ್ಸ್​​ ಅಥ್ಲೆಟಿಕ್ಸ್​ನಲ್ಲಿ ಬೆಂಗಳೂರಿನ ಪುಷ್ಪಲತಾಗೆ ಮೂರು ಪದಕ
Published on
ಬೆಂಗಳೂರು: ಗೋವಾದ ಬಂಬೋಲಿಮ್​ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 3ನೇ ರಾಷ್ಟ್ರೀಯ ಮಾಸ್ಟರ್ಸ್​ ಅಥ್ಲೆಟಿಕ್​ (Masters Athletics) ಚಾಂಪಿಯನ್​ನಲ್ಲಿ ಬೆಂಗಳೂರಿನ ಪುಷ್ಪಲತಾ ಮಹಾಳಂಕ ಕರ್ನಾಟಕವನ್ನು ಪ್ರತಿನಿಧಿಸಿ 3 ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಅವರು 5 ಕಿಮೀ ನಡಿಗೆಯಲ್ಲಿ ಚಿನ್ನ, 4/400 ಮೀ. ರಿಲೇಯಲ್ಲಿ ಬೆಳ್ಳಿ ಮತ್ತು 4/100 ಮೀ. ರಿಲೇಯಲ್ಲಿ ಕಂಚಿನ ಪದಕ ಜಯಿಸಿದರು. ಪುಷ್ಪಲತಾ ವೃತ್ತಿಯಲ್ಲಿ ಗಣಿತ ಸಂಶೋಧಕಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net