

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:
ರಾಜ್ಯದಲ್ಲಿ ನಿಯಮ ಮೀರಿ ನಾಗರಿಕರನ್ನು ಬಂಧಿಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ನ್ಯಾಯಾಲಯದ ಆದೇಶಗಳು ಮತ್ತು ಸಂವಿಧಾನಾತ್ಮಕ ನಿಯಮಗಳನ್ನು ಉಲ್ಲಂಘಿಸಿ ಪೊಲೀಸ್ ಅಧಿಕಾರಿಗಳು ಮನಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
⚠️
ಸಿವಿಲ್ ಕೇಸ್ನಲ್ಲಿ ನಿಮಗೇನು ಕೆಲಸ?
ಸಿವಿಲ್ ವ್ಯಾಜ್ಯದಲ್ಲಿ ಪೊಲೀಸರ ಹಸ್ತಕ್ಷೇಪ ಇರಬಾರದು ಎಂದು ಸುಪ್ರೀಂ ಕೋರ್ಟ್, ಹೈಕೋರ್ಟ್ಗಳು ಹಲವು ಬಾರಿ ಹೇಳಿದೆ. ಆದರೆ, ಪ್ರತಿ ಬಾರಿಯೂ ನಿಯಮ ಉಲ್ಲಂನೆಯಾಗುತ್ತಿದೆ. ಕೊಲೆ ಪ್ರಕರಣಗಳ ಆರೋಪಿಗಳನ್ನು ಹುಡುಕುವ ಬದಲು ಸಿವಿಲ್ ಪ್ರಕರಣದಲ್ಲಿ ತಕ್ಷಣ ಹಾಜರಾಗುತ್ತಾರೆ. ಮದುವೆ ಭರವಸೆ ನೀಡಿ ಅತ್ಯಾಚಾರ ಪ್ರಕರಣದಲ್ಲಂತೂ ಕೇಳುವುದೇ ಬೇಡ, ಹುಡುಗಿ ದೂರು ನೀಡಿದ ತಕ್ಷಣವೇ ಹುಡುಗನನ್ನು ಬಂಧಿಸುತ್ತಾರೆ. ನ್ಯಾಯಾಲಯ ಇಲ್ಲವಾಗಿದ್ದರೆ ಪೊಲೀಸರ ಅಕ್ರಮ ಎಲ್ಲೆ ಮೀರುತ್ತಿತ್ತು ಎಂದು ಖಟುವಾಗಿ ನುಡಿಯಿತು.
ಮ್ಯಾಜಿಸ್ಟ್ರೆಟ್ ಮೇಲೂ ಅಸಮಾಧಾನ: