ಗುಲಾಬಿ ಮಾರ್ಗದಲ್ಲಿ ರೈಲುಗಳ ಪ್ರಯೋಗಾತ್ಮಕ ಸಂಚಾರಕ್ಕೆ ವೇಗ | metro

ಮೆಟ್ರೋ
ಮೆಟ್ರೋ
Published on

ಪ್ರಮುಖ ಮುಖ್ಯಾಂಶಗಳು

  • ಬಿಎಂಆರ್​ಸಿಎಲ್​ ಮಾಹಿತಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಭಾರತ್​ ಅರ್ತ್​ ಮೂವರ್ಸ್​ ಲಿಮಿಟೆಡ್​ (ಬಿಇಎಂಎಲ್​) ಸರಬರಾಜು ಮಾಡಿದ ಪ್ರೊಟೋಟೈಪ್​ ಮೆಟ್ರೋ ರೈಲಿನ ಪ್ರಯೋಗಾತ್ಮಕ ಸಂಚಾರ ಹಾಗೂ ಪರಿಶೀಲನೆಗಳು ನಮ್ಮ ಮೆಟ್ರೋದ ಗುಲಾಬಿ ಮಾರ್ಗದ 7.5 ಕಿ.ಮೀ. ಎತ್ತರಿಸಿದ ಮಾರ್ಗದಲ್ಲಿ ತ್ವರಿತವಾಗಿ ಸಾಗುತ್ತಿದೆ.
ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಮೊದಲ ಹಂತ ವಿಸ್ತರಿಸಿದ್ದು, ವಾಣಿಜ್ಯ ಸಂಚಾರ ಆರಂಭಕ್ಕೂ ಮೊದಲು ಸುರಕ್ಷತೆ, ಕಾರ್ಯಕ್ಷಮತೆ ಮತ್ತು ಕಾರ್ಯಾಚರಣಾ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 7.30ರವರೆಗೆ ಪರೀಕ್ಷಾ ಸಂಚಾರ ನಡೆಸಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಅಧಿಕಾರಿಗಳು ತಿಳಿಸಿದ್ದಾರೆ.
ರೈಲಿನ ಮೋಟಾರ್​ ಮತ್ತು ಪ್ರೋಪಲ್ಶನ್​ ವ್ಯವಸ್ಥೆಯ ಕಾರ್ಯಕ್ಷಮತೆ, ವಿದ್ಯುತ್​ ಬಳಕೆಯ ದಕ್ಷತೆ, ಬ್ರೇಕಿಂಗ್​ ಮಾನದಂಡಗಳು ಹಾಗೂ ಒಟ್ಟಾರೆ ಸ್ಥಿರತೆಯನ್ನು ಇಂಜಿನಿಯರ್​ಗಳು ನಿಕಟವಾಗಿ ಪರಿಶೀಲಿಸುತ್ತಿದ್ದಾರೆ. ಪ್ರಯೋಗದ ಅವಧಿಯಲ್ಲಿ ವಿವಿಧ ವೇಗಗಳಲ್ಲಿ ಟ್ರಾಕ್ಷನ್​ ಹಾಗೂ ಬ್ರೇಕ್​ ಪರೀಕ್ಷೆಗಳೂ ನಡೆಯುತ್ತಿವೆ. ಈ ಪ್ರಯೋಗಾತ್ಮಕ ಪರೀಕ್ಷೆಗಳು ಫೆ. 15ರ ವರೆಗೆ ಮುಂದುವರಿಯಲಿವೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.
ಈ ಹಂತದ ಪರೀೆಗಳ ಬಳಿಕ ಆಸಿಲೇಷನ್​, ಸಿಗ್ನಲಿಂಗ್​, ವಿದ್ಯುತ್​ ಮತ್ತು ದೂರಸಂಪರ್ಕ ವ್ಯವಸ್ಥೆಗಳ ಪರಿಶೀಲನೆಗಳು ನಡೆಯಲಿದ್ದು, ಏಪ್ರಿಲ್​ ಮಧ್ಯವರೆಗೆ ಪರೀೆಗಳು ಮುಂದುವರಿಯುವ ಸಾಧ್ಯತೆ ಇದೆ. ಆಂತರಿಕ ಮೌಲ್ಯಮಾಪನಗಳು ಪೂರ್ಣಗೊಂಡ ನಂತರ ಆರ್​ಡಿಎಸ್​ಒ ಮತ್ತು ಸಿಎಂಆರ್​ಎಸ್​ ತಜ್ಞರ ತಂಡಗಳು ತಪಾಸಣೆ ನಡೆಸಿ, ವಿವರವಾದ ವರದಿ ಸಲ್ಲಿಸಲಿವೆ. ಅವರ ಶಿಫಾರಸ್ಸಿನ ಆಧಾರದಲ್ಲಿ ಕೇಂದ್ರ ರೈಲ್ವೆ ಮಂಡಳಿ ಸುರಕ್ಷತಾ ಪ್ರಮಾಣಪತ್ರ ನೀಡಲಿದೆ. ಈ ಪ್ರಮಾಣಪತ್ರ ಲಭ್ಯವಾದರೆ ಮೇನಲ್ಲಿ ವಾಣಿಜ್ಯ ಸಂಚಾರ ಆರಂಭಿಸುವ ಗುರಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್​ಗೆ ಕಾರ್ಯಾರಂಭ?
ಪಿಂಕ್​ಲೈನ್​ ಒಟ್ಟು 21.56 ಕಿ.ಮೀ. ಉದ್ದವಿದ್ದು, ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಐದು ಪ್ಯಾಕೇಜುಗಳಲ್ಲಿ ಕಾಮಗಾರಿಗಳು ನಡೆಯುತ್ತಿದೆ. ಇದರಲ್ಲಿ 7.5 ಕಿ.ಮೀ ಎತ್ತರಿಸಿದ ಮಾರ್ಗವಾಗಿದ್ದು, ಉಳಿದ 13.76 ಕಿ.ಮೀ ಸುರಂಗ ಮಾರ್ಗವಾಗಿದೆ. ಒಟ್ಟು 17 ನಿಲ್ದಾಣಗಳನ್ನು ಒಳಗೊಂಡಿರುವ ಈ ಮಾರ್ಗದಲ್ಲಿ, ಕಳೇನ ಅಗ್ರಹಾರ& ತಾವರೆಕೆರೆ ವರೆಗೆ ಐದು ನಿಲ್ದಾಣಗಳಿವೆ. ಈ ಭಾಗದ ಕಾಮಗಾರಿ ಅಂತಿಮ ಹಂತದಲಿದೆ. ಡಿಸೆಂಬರ್​ ವೇಳೆಗೆ ಪೂರ್ತಿ ಮಾರ್ಗ ಕಾರ್ಯಾರಂಭವಾಗುವ ನಿರೀೆ ಇದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net