ಪ್ರಾಂಶುಪಾಲ ಶರತ್ ಕುಮಾರ್‌ಗೆ ಪಿಎಚ್‌ಡಿ ಪದವಿ/phd

 ಪಿಎಚ್‌ಡಿ ಪದವಿ ಪಡೆದ  ಪ್ರಾಂಶುಪಾಲ ಶರತ್ ಕುಮಾರ್‌
ಪಿಎಚ್‌ಡಿ ಪದವಿ ಪಡೆದ ಪ್ರಾಂಶುಪಾಲ ಶರತ್ ಕುಮಾರ್‌
Published on
ಮೈಸೂರು ವಿವಿಯ ಪ್ರಾಧ್ಯಾಪಕ ಡಾ. ಪ್ರವೀಣ ಕೆ.ಬಿ ಅವರ ಮಾರ್ಗದರ್ಶನದಲ್ಲಿ
ಶರತ್ ಕುಮಾರ್ ಸಿ.ಆರ್, ಮಂಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದಿಂದ ಶೈಕ್ಷಣಿಕ ಸಂಶೋಧನಾ ಪದವಿ (ಪಿಎಚ್‌ಡಿ) ಲಭಿಸಿದೆ.
(ಎಸ್‌ಡಬ್ಲೂಓಟಿ ) ಸ್ವಾಟ್ ಅನಾಲಿಸಿಸ್ ಆಫ್ ಆನ್‌ಲೈನ್ ಕರಿಕ್ಯುಲಮ್ ಟ್ರಾನ್ಸಾಕ್ಷನ್ ಬೈ ಟೀಚರ್ ಎಜುಕೇಟರ್ಸ್ ಆ್ ಕಾಲೇಜಸ್ ಆಫ್ ಎಜುಕೇಶನ್ ಎಂಬ ಮಹಾಪ್ರಬಂಧವನ್ನು ಪಿಎಚ್‌ಡಿ ಪದವಿಗಾಗಿ ಶರತ್ ಕುಮಾರ್ ಸಿ.ಆರ್, ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು. 2017ರ ಮೈಸೂರು ವಿಶ್ವವಿದ್ಯಾಲಯದ ಪಿಎಚ್‌ಡಿ ನಿಯಮಾವಳಿಯಡಿ ಮಹಾ ಪ್ರಬಂಧವನ್ನು ಅಂಗೀಕರಿಸಲಾಗಿದೆ. ಮುಂದಿನ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡುವುದಾಗಿ ಪರೀಕ್ಷಾಂಗ ಕುಲಸಚಿವ ಪ್ರೊ. ಕೆಂಪೇಗೌಡ ಬಿ.ಕೆ ತಿಳಿಸಿದ್ದಾರೆ.
ಮಾಗಡಿ ಮುಖ್ಯರಸ್ತೆ ತಾವರೆಕೆರೆಯ ಬಿಜಿಎಸ್ ಇಂಗ್ಲಿಷ್ ಸ್ಕೂಲ್‌ನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ಶರತ್ ಕುಮಾರ್ ಸಿ.ಆರ್ ಅವರು ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಪರಿಶ್ರಮ, ಶಿಸ್ತು ಹಾಗೂ ಸಂಶೋಧನಾ ಮನೋಭಾವದ ಮೂಲಕ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ. ಇವರ 25ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
ಶರತ್ ಕುಮಾರ್ ಅವರ ಸಾಧನೆಯನ್ನು ಗುರುತಿಸಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ, ಶ್ರೀ ಮಠದ ಕಾನೂನು ಅಧಿಕಾರಿ ವಿರೂಪಾಕ್ಷ ಎಚ್,ಶಾಲಾ ಆಡಳಿತ ವರ್ಗ ಹಾಗೂ ಶಿಕ್ಷಕ ವೃಂದ ಶರತ್ ಕುಮಾರ್ ಅವರನ್ನು ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net