ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿದ್ದಕ್ಕೆ ಆಕ್ರೋಶ

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಎಸ್​ಐಆರ್​ ವಿರೋಧಿ ಜಾತ್ಯತಿತ ಪಕ್ಷಗಳು, ಜನಪರ ಸಂಟಗಳ ಒಕ್ಕೂಟ ಕರ್ನಾಟದ ಮುಖಂಡರು, ನಿರಾಶ್ರಿತರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಎಸ್​ಐಆರ್​ ವಿರೋಧಿ ಜಾತ್ಯತಿತ ಪಕ್ಷಗಳು, ಜನಪರ ಸಂಟಗಳ ಒಕ್ಕೂಟ ಕರ್ನಾಟದ ಮುಖಂಡರು, ನಿರಾಶ್ರಿತರು ಮಂಗಳವಾರ ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್​ಐಆರ್​ ವಿರೋಧಿ, ಜನಪರ ಸಂಟನೆಗಳ ಒಕ್ಕೂಟದಿಂದ ಪ್ರತಿಭಟನೆ
  • ಪ್ರತಿಭಟನಾಕಾರರ ಬಂಧನ, ಬಿಡುಗಡೆ
ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ (ಎಸ್​ಐಆರ್​) ಅರ್ಹರ ಮತದಾನದ ಹಕ್ಕನ್ನು ರದ್ದುಗೊಳಿಸಲಾಗಿದೆ ಎಂದು ಆರೋಪಿಸಿ, ನಗರದಲ್ಲಿ ವಿವಿಧ ಸಂ& ಸಂಸ್ಥೆಗಳ ಮುಖಂಡರ ನೇತೃತ್ವದಲ್ಲಿ ಮಂಗಳವಾರ ಚುನಾವಣಾ ಆಯೋಗ ಚಲೋ ಪ್ರತಿಭಟನೆ ನಡೆಸಿದರು.
ಸ್ವಾತಂತ್ರ್ಯ ಉದ್ಯಾನವನದಲ್ಲಿ ಜಮಾಯಿಸಿದ ಎಸ್​ಐಆರ್​ ವಿರೋಧಿ ಜಾತ್ಯತಿತ ಪಕ್ಷಗಳು, ಜನಪರ ಸಂಟನೆಗಳ ಒಕ್ಕೂಟ ಕರ್ನಾಟಕದ ಮುಖಂಡರು, ನಿರಾಶ್ರಿತರು "ಚುನಾವಣಾ ಆಯೋಗ ಕಚೇರಿ ಚಲೋ' ನಡೆಸಿ, ಕೇಂದ್ರ, ರಾಜ್ಯ ಸರ್ಕಾರ ಹಾಗೂ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಕಚೇರಿಗೆ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.
ಬಹುಭಾಷಾ ನಟ ಪ್ರಕಾಶ್​ ರೈ ಮಾತನಾಡಿ, ಚುನಾವಣಾ ಆಯೋಗವು ಸ್ವಾತಂತ್ರವಾಗಿ ತೀರ್ಮಾನ ತೆಗೆದುಕೊಳ್ಳದೆ ಕೇಂದ್ರ ಸರ್ಕಾರದ ಒತ್ತಾಯಕ್ಕೆ ಮಣಿದು ತರಾತುರಿಯಲ್ಲಿ ಎಸ್​ಐಆರ್​ ಅಭಿಯಾನ ನಡೆಸಿದೆ. ವೈಜ್ಞಾನಿಕವಾಗಿ ರೂಪರೇಷೆಗಳನ್ನು ಸಹ ತೆಗೆದುಕೊಂಡಿಲ್ಲ. ಆಯೋಗ ಮತ್ತು ಬಿಜೆಪಿ ಸರ್ಕಾರ ಸಂಚು ರೂಪಿಸಿ ಜನರ ಮತದಾನದ ಅಧಿಕಾರವನ್ನು ರದ್ದುಗೊಳಿಸಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ 1 ಕೋಟಿಗೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಮತಗಟ್ಟೆ ಅಧಿಕಾರಿ ಮನೆಗಳ ಬಳಿಗೆ ಹೋಗದೆ ಕುಳಿತ ಕಡೆಯಲ್ಲೆ ಪ್ರಕ್ರಿಯೆ ನಡೆಸಿದ್ದಾರೆ. ಗೈರು, ದಾಖಲೆ ಅಸಮರ್ಪಕ, ಇತರೆ ಕಾರಣ ನೀಡಿ ಉದ್ದೇಶಪೂರ್ವಕವಾಗಿಯೇ ರದ್ದುಗೊಳಿಸಿದ್ದಾರೆ. ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಾಮ್​ರ್&6 ಅರ್ಜಿ ಸಲ್ಲಿಸಲು ಆಯೋಗದ ಅಧಿಕಾರಿಗಳು ತಿಳಿಸಿದ್ದು, ಇದಕ್ಕೂ ಮೊದಲು ರದ್ದುಗೊಳಿಸಲು ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಬೇಕು. ನುಸುಳುಕೋರರನ್ನು ಪತ್ತೆ ಹಚ್ಚಲು ನಡೆಸಿರುವ ಪ್ರಕ್ರಿಯೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದು, ಅವರ ಪ್ರಕಾರ ಮುಸ್ಲಿಂ, ಸಿಖ್ಖರು, ಕೆಸ್ತರು ಎಂದರೆ ನುಸುಳುಕೋರರು ಎಂದು ಬಿಂಬಿಸಿ ಬಿಟ್ಟಿದ್ದಾರೆ. ಕಳೆದ ಚುನಾವಣೆಗಳಲ್ಲಿ ಬಿಜೆಪಿ ಪರ ಮತ ಹಾಕಿದವರ ಹೆಸರುಗಳನ್ನು ಉಳಿಸಿಕೊಂಡು, ಪಶ್ನೆ ಮಾಡಿದವರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಇದರ ವಿರುದ್ಧ ರಾಜ್ಯ ಸರ್ಕಾರವು ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
* ಕೇಂದ್ರದಿಂದ ಅಧಿಕಾರ ದುರ್ಬಳಕೆ
ಪ್ರತಿಭಟನಾಕಾರರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಕೇಂದ್ರ ಸರ್ಕಾರವು ಇ.ಡಿ., ಎನ್​.ಐ.ಎ.ನಂತಹ ತನಿಖಾ ತಂಡಗಳನ್ನು ದುರ್ಬಳಕೆ ಮಾಡಿಕೊಂಡು ಸಾಮಾನ್ಯ ಜನರಿಗೆ ಕಿರುಕುಳ ನೀಡುತ್ತ ಬಂದಿದೆ. ಪ್ರತಿಭಟನಾಕಾರರ ಮನವಿಯನ್ನು ಸಿಎಂ ಡಿ.ಕೆ. ಶಿವಕುಮಾರ್​ ಮೂಲಕ ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು. ಬೇಡಿಕೆಗಳನ್ನು ಈಡೇರಿಸುವ ಕುರಿತು ನಿರ್ದೇಶನ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಸಿ.ಎಸ್​. ದ್ವಾರಕಾನಾಥ್​, ಮಹಾಂತೇಶ್​, ಸೀತಾರಾಮ ಗುಂಡಪ್ಪ, ಮುಹಮ್ಮದ್​ ಯೂಸುಫ್​ ಕನ್ನಿ, ಅರುಣ್​ ಲೂಯಿಸ್​, ಜೆ.ಎಂ. ವೀರಸಂಗಯ್ಯ, ತಾಹೇರ್​ ಹುಸೇನ್​, ಕೆ.ವಿ. ಭಟ್​, ವಿಠ್ಠಲ್​ ಹೆಗಡೆ, ಜಿ.ಎನ್​. ನಾಗರಾಜ್​, ಎನ್​. ವೆಂಕಟೇಶ್​, ಕೆ.ಎಲ್​. ಅಶೋಕ್​, ತಾರಾರಾವ್​, ಡಾ.ವಿಜಯಾ ಮತ್ತಿತರರಿದ್ದರು.
ಹಕ್ಕೋತ್ತಾಯಗಳು
ಮತದಾರರ ಪಟ್ಟಿಯಿಂದ ಹೊರಗುಳಿದವರು ಅರ್ಜಿ ಸಲ್ಲಿಸಲು ನೀಡಿರುವ ಅವಕಾಶವನ್ನು ವಿಸ್ತರಿಸಬೇಕು. ಬೇರೆಡೆಗೆ ಸ್ಥಳಾಂತರಗೊಂಡವರಿಗೆ ಾಮ್​ರ್& 8 ನಮೂನೆ ನೀಡಿ ಸ್ಥಳ ಬದಲಾಯಿಸಿಕೊಳ್ಳಲು ಅವಕಾಶ ನೀಡಬೇಕು. ನೋಟಿಸ್​ ನೀಡಿರುವ 43 ಲಕ್ಷ ಮತದಾರರ ಹೆಸರುಗಳನ್ನು ಕಾರಣದ ಸಮೇತ ಪ್ರಕಟಿಸಬೇಕು. ಗ್ರಾಮ, ವಾರ್ಡ್​ ಸಭೆಗಳಲ್ಲಿ ವ್ಯಾಪಕ ಪ್ರಚಾರ ಮಾಡಿ ಮತ್ತೊಮ್ಮೆ ಅಭಿಯಾನ ನಡೆಸಬೇಕು. ರಾಜ್ಯದಲ್ಲಿ ಆಗಿರುವ ಅಭಿಯಾನವನ್ನು ರದ್ದುಗೊಳಿಸಿ, ಮತ್ತೊಮ್ಮೆ ಅಭಿಯಾನ ನಡೆಸಲು ವಿಶೇಷ ಸಚಿವ ಸಂಪುಟ ಸಭೆ ನಡೆಸಬೇಕು.
ಕೋಟ್​:
ಕಳೆದ ಚುನಾವಣೆಗಳಲ್ಲಿ ಮತ ಚಲಾವಣೆ ಮಾಡಿದ್ದರೂ ಯಾವ ಮಾನದಂಡ ಇಟ್ಟುಕೊಂಡು ಹೆಸರು ರದ್ದುಗೊಳಿಸಿದರು. ಎಸ್​ಐಆರ್​ ಹೆಸರಿನಲ್ಲಿ ಚುನಾವಣಾ ಆಯೋಗವು ಮತದಾರರಿಗೆ ಅನ್ಯಾಯವಾಗಿದೆ.
- ಕಿಶೋರ್​, ಚಿತ್ರನಟ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net