ಇಆರ್‌ಒಗೆ ಮಾತ್ರ ಮತದಾರರ ನೋಂದಣಿ ಅಧಿಕಾರ

ero-has-the-authority
ero-has-the-authority
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಸ್ಪಷ್ಟನೆ
ಬೆಂಗಳೂರು: ಮತದಾರರ ನೋಂದಣಾಧಿಕಾರಿಗಳಿಗೆ (ಇಆರ್‌ಒ) ಮಾತ್ರ ಮತದಾರರ ನೋಂದಣಿ ಮಾಡುವ ಅಧಿಕಾರವಿದ್ದು, ಎಸ್‌ಐಆರ್ ಕಾರ್ಯವನ್ನು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಸೂಚಿಸಿದ್ದಾರೆ.
ಬೆಂಗಳೂರು ಕೇಂದ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಕಾರ್ಯವನ್ನು ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಪಾರದರ್ಶಕವಾಗಿ, ನಿಖರ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ಎಸ್‌ಐಆರ್ ಕಾರ್ಯಕ್ಕೆ ವೇಗ ನೀಡಿ:

ಎಸ್‌ಐಆರ್ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳು ತಂಡಗಳಾಗಿ ಕಾರ್ಯನಿರ್ವಹಿಸಬೇಕು. ಪರಸ್ಪರ ಸಮನ್ವಯದಿಂದ ಕೆಲಸ ಮಾಡಿದರೆ ಕೆಲಸವನ್ನು ವೇಗವಾಗಿ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಮೇಲಾಧಿಕಾರಿಗಳು ಹಾಗೂ ಮತದಾರರ ನೋಂದಣಾಧಿಕಾರಿಗಳು ಬಿಎಲ್ಒಗಳೊಂದಿಗೆ ಸಂಯಮದಿಂದ ನಡೆದುಕೊಂಡು ಅವರಿಂದ ಎಸ್‌ಐಆರ್ ಕಾರ್ಯವನ್ನು ಯಶಸ್ವಿಗೊಳಿಸಲು ಸೂಚಿಸಿದರು.
ಸಭೆಯಲ್ಲಿ ಜಂಟಿ ಮುಖ್ಯ ಚುನಾವಣಾಧಿಕಾರಿ ವಿ.ರಾಘವೇಂದ್ರ, ಕಂದಾಯ ಅಪರ ಆಯುಕ್ತ ಕೆ.ರಂಗನಾಥ್, ಜಂಟಿ ಆಯುಕ್ತ ಹೇಮಂತ್ ಶರಣ್, ಉಪ ಆಯುಕ್ತರಾದ ಶ್ರೀನಿವಾಸ್, ಅಬ್ದುಲ್ ರಬ್ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಬಾಕಿ ಸಂಭಾವನೆ ಬಿಡುಗಡೆಗೆ ಸೂಚನೆ:

ಮನೆ ಮನೆ ತೆರಳಿ ಎಸ್‌ಐಆರ್ ಅರ್ಜಿಗಳ ವಿತರಣೆ ಹಾಗೂ ಸಂಗ್ರಹಣೆಯೊಂದಿಗೆ ಗಣತಿ ಕಾರ್ಯದ ಯಶಸ್ವಿಗೆ ಶ್ರಮಿಸುತ್ತಿರುವ ಎಲ್ಲ ಬಿಎಲ್ಒಗಳಿಗೆ ನೀಡಬೇಕಾದ ಬಾಕಿ ಸಂಭಾವನೆಯನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಸಿಇಒ ಅವರು ಕೇಂದ್ರ ಜಿಲ್ಲಾ ಚುನಾವಣಾ ಮುಖ್ಯಸ್ಥರಿಗೆ ಸೂಚಿಸಿದರು.
"

ಮುಖ್ಯ ಚುನಾವಣಾಧಿಕಾರಿ ರವರು ನೀಡಿದ ಸೂಚನೆಯಂತೆ ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ನಿಯಮಬದ್ಧವಾಗಿ ಕಾರ್ಯನಿರ್ವಹಿಸಿ ಎಸ್‌ಐಆರ್ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

- ಜಿ.ಜಗದೀಶ್, ಕೇಂದ್ರ ಪಾಲಿಕೆ ಆಯುಕ್ತ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net