ತಿಂಗಳೊಳಗೆ ಅಲೆಮಾರಿ, ಆದಿವಾಸಿ ನಿಗಮ ಸ್ಥಾಪನೆ

ಬೆಂಗಳೂರು ನಗರದ ಡಾ.ಬಿ.ಆರ್​.ಅಂಬೇಡ್ಕರ್​ ಭವನದಲ್ಲಿ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಹಾಗೂ ರಾಜ್ಯ ಪಂಚ ಬುಡಕಟ್ಟು ಸಂರಕ್ಷಣಾ ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಆದಿವಾಸಿ ದಿನಾಚರಣೆ ಹಾಗೂ ರಾಜ್ಯಮಟ್ಟದ ಸಮಾವೇಶವನ್ನು ಡಿ.ಕೆ.ಶಿವಕುಮಾರ್​ ಉದ್ಘಾಟಿಸಿದರು.
ಬೆಂಗಳೂರು ನಗರದ ಡಾ.ಬಿ.ಆರ್​.ಅಂಬೇಡ್ಕರ್​ ಭವನದಲ್ಲಿ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಹಾಗೂ ರಾಜ್ಯ ಪಂಚ ಬುಡಕಟ್ಟು ಸಂರಕ್ಷಣಾ ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಆದಿವಾಸಿ ದಿನಾಚರಣೆ ಹಾಗೂ ರಾಜ್ಯಮಟ್ಟದ ಸಮಾವೇಶವನ್ನು ಡಿ.ಕೆ.ಶಿವಕುಮಾರ್​ ಉದ್ಘಾಟಿಸಿದರು.
Published on
ಬೆಂಗಳೂರು: ಆದಿವಾಸಿ ಸಮುದಾಯಗಳ ಅಭಿವೃದ್ಧಿಗಾಗಿ ಒಂದು ತಿಂಗಳೊಳಗೆ ಅಲೆಮಾರಿ, ಆದಿವಾಸಿ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಭರವಸೆ ನೀಡಿದರು.
ನಗರದ ಡಾ.ಬಿ.ಆರ್​.ಅಂಬೇಡ್ಕರ್​ ಭವನದಲ್ಲಿ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಹಾಗೂ ರಾಜ್ಯ ಪಂಚ ಬುಡಕಟ್ಟು ಸಂರಕ್ಷಣಾ ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಆದಿವಾಸಿ ದಿನಾಚರಣೆ ಹಾಗೂ ರಾಜ್ಯಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ನಿಗಮ ಸ್ಥಾಪನೆ ಮಾಡುವ ಕುರಿತು ಪಕ್ಷದ ಚುನಾವಣೆ ಪ್ರನಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಲಾಗಿದೆ ಎಂದರು.
ತಮ್ಮೆಲ್ಲರ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಮಕ್ಕಳನ್ನು ಶಿಕ್ಷಣದಿಂದ ವಂಚಿಸಬಾರದು. ಉದ್ಯೋಗ, ಆಹಾರ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಪ್ರಕೃತಿಯಲ್ಲಿ ಜೀವಿಸುವ ಅದೃಷ್ಟ ಯಾರಿಗೂ ಸಿಗುವುದಿಲ್ಲ, ಅದ್ದರಿಂದ ಯಾರು ಸಹ ಪ್ರಕೃತಿ, ಕಾಡಿನಿಂದ ದೂರ ಬರಬಾರದು. ಬೇರು ಇದ್ದರೆ ಮಾತ್ರ ಮರ ಬೆಳೆಯಲು ಸಾಧ್ಯ ಎಂದು ತಿಳಿಸಿದರು.
ದೇಶಾದ್ಯಂತ ಮತದಾರರ ವಿಶೇಷ ಪರಿಷ್ಕರಣೆ (ಎಸ್​ಐಆರ್​) ನಡೆಯುತ್ತಿದ್ದು, ಯಾರ ಮತವು ರದ್ದುಗೊಳ್ಳದಂತೆ ಎಚ್ಚರವಹಿಸಬೇಕು. ಉದ್ದೇಶ ಪೂರ್ವಕವಾಗಿಯೇ ಮತ ರದ್ದುಗೊಳಿಸುವ ದೊಡ್ಡ ಹುನ್ನಾರ ನಡೆಯುತ್ತಿದೆ. ಇದರಿಂದ ಸಾಮಾನ್ಯ ಜನಕ್ಕೆ ತೊಂದರೆಯಾಗಬಾರದು ಎಂದು ಸರ್ಕಾರದಿಂದ ಮೂಲ ನಿವಾಸಿ ಪ್ರಮಾಣವನ್ನು ವಿತರಣೆ ಮಾಡಲಾಗುತ್ತಿದ್ದು, ತಮಗು ತಲುಪಿಸಲಾಗುವುದು ಎಂದರು.
ಬೆಂಗಳೂರು ಸೇರಿದಂತೆ ಮಹಾನಗರದಿಂದ ದೂರ ಇರುವ ಕೊರಗು ಯಾರಿಗೂ ಬೇಡ. ಪರಿಶ್ರಮ, ಪ್ರಕೃತಿ ಮೇಲಿನ ಪ್ರೀತಿಯಿಂದ ಬದುಕುತ್ತೀದಿರಿ. ಆದಿವಾಸಿಗಳೆಂಬ ಕೀಳರಿಮೆ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸದಾ ಪ್ರಕೃತಿಯನ್ನು ರಸುವ ಕಾಯದಲ್ಲಿ ತೊಡಗಿಸಿಕೊಂಡಿರುವವರು ಮೂಲ ಕಸುಬಿನಿಂದ ದೂರ ಹೋಗಬಾರದು. ಈಗಾಗಲೇ ಐದು ಗ್ಯಾರೆಂಟಿಗಳನ್ನು ನೀಡಲಾಗುತ್ತಿದೆ. ಇದರ ಜತೆಗೆ ಭೂಮಿ, ಗ್ರಾಮ, ಬುದುಕಿನ ಗ್ಯಾರೆಂಟಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವ ಅಜಯ್​ ಸಿಂಗ್​, ಶಾಸಕ ಕೋಳಿವಾಡ್​, ಮಹಾಸಭಾದ ರಾಜ್ಯಾಧ್ಯಕ್ಷ ಬಿ.ಎಲ್​.ಹನುಮಂತಪ್ಪ, ಯುವ ಅಧ್ಯಕ್ಷ ಜಗ್ಗು, ಮಹಿಳಾ ಘಟಕದ ಅಧ್ಯಕ್ಷೆ ಲತಾ ಮೋಹನ್​, ನಾಗರಾಜ್​, ಉಜ್ಜಜ್ಜಿ ರಾಜಣ್ಣ, ನೆಲ ನರೇಂದ್ರ ಬಾಬು ಮತ್ತಿರರು ಉಪಸ್ಥಿತರಿದ್ದರು.
* ಶೋಷಣೆ ಮುಕ್ತರನ್ನಾಗಿಸಿ
ಚಿತ್ರನಟ ಪ್ರಕಾಶ್​ ರಾಜ್​ ಮಾತನಾಡಿ, ಭೂಮಿಯ ಮೂಲ ನಿವಾಸಿಗಳೇ ಆದಿವಾಸಿಗಳು, ನಾಗರಿಕ ಸಮಾಜ ಅವರನ್ನು ಎಲ್ಲಿಯ ತನಕ ಗೌರವಿಸುವುದಿಲ್ಲವೋ ಅಲ್ಲಿತನ ಶೋಷಿತ ಸಮುದಾಯಕ್ಕೆ ಅನ್ಯಾಯ ನಡೆಯುತ್ತಲೇ ಇರುತ್ತದೆ. ಅವರನ್ನು ಶೋಷಣೆ ಮುಕ್ತರನ್ನಾಗಿ ಮಾಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಕಾಡಿನಲ್ಲಿ ಜೀವಿಸುತ್ತಿರುವ ಆದಿವಾಸಿಗಳಲ್ಲಿ ಕಪು$್ಪ, ಬಿಳಿ ಬಣ್ಣದ ಬೇಧವಿಲ್ಲ. ಬಣ್ಣಬಣ್ಣದ ಬೇರುಗಳೇ ಅವರ ಮೂಲ. ಅಂಡಮಾನ್​, ನಿಕೋಬಾರ್​ ಬಗ್ಗೆ ರಾಹುಲ್​ಗಾಂಧಿ ಸೇರಿದಂತೆ ಅನೇಕರು ನಿರಂತರವಾಗಿ ಮಾತನಾಡುತ್ತಿದ್ದಾರೆ. ಆದರೆ ಇದನ್ನು ಗುರುತಿಸುವವರು ಇಲ್ಲವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಕೃತಿ, ಕಾಡು, ಆದಿವಾಸಿಗಳನ್ನು ಉಳಿಸಿಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಉಳಿಗಾಲ ಇರುವುದಿಲ್ಲ. ಆಂತಹಕರಣದಿಂದ ಸರ್ಕಾರ ತೀರ್ಮಾನ ತೆಗೆದುಕೊಂಡು ಸಬಲೀಕರಣಕ್ಕೆ ಸಹಕಾರ ನೀಡಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು ಮಾಡಬೇಕು ಎಂದು ಒತ್ತಾಯಿಸಿದರು.
ಕವಿ ತೇಜಸ್ವಿ ಅವರು ಬರೆದಿರುವ ಎಂತನ ಪುಂಗಿ ಪುಸ್ತಕದಲ್ಲಿ ಆದಿವಾಸಿಗಳ ಸಮಸ್ಯೆಗಳು ಏನು ಎಂಬುದರ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಜತೆಗೆ ಸಮಸ್ಯೆಗಳಿಂದ ಹೇಗೆ ಮುಕ್ತರಾಗಬೇಕು ಎಂಬುದರ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
* ಆದಿವಾಸಿಗಳ ನೋವು ನಿವಾರಿಸಿ
ಮಹಾಸಭಾದ ಗೌರವಾಧ್ಯಕ್ಷ ಸಿ.ಎಸ್​.ದ್ವಾರಕನಾಥ್​ ಮಾತನಾಡಿ, ಆದಿವಾಸಿಗಳು ಎಂದರೆ ಊಟದ ಜತೆಗೆ ಕರಿಬೇವು ಇದ್ದ ಹಾಗೆ ಅಲ್ಲ. ಎಲ್ಲಾ ಕಾಲಕ್ಕೂ ಉಪಯೋಗಕ್ಕೆ ಬರುವವರು. ನೋವು ಹೇಳಿಕೊಳ್ಳಲು ಹಬ್ಬ ಆಚರಿಸಿಕೊಳ್ಳುತ್ತಿಲ್ಲ, ದಶಕಗಳ ಆದಿವಾಸಿಗಳ ಮೂಲ ನೋವನ್ನು ನಿವಾರಿಸಿ ಎಂದು ಕೋರಿದರು.
ಅರಣ್ಯ ಕಾಯ್ದೆಯಿಂದ ರಾಜ್ಯದಲ್ಲಿ 3800ಕ್ಕೂ ಹೆಚ್ಚು ಮಂದಿ ಹಕ್ಕಿಪಿಕ್ಕಿ, ಚಂಚಲು ಸಮುದಾಯವು ತೊಂದರೆಗೆ ಸಿಕ್ಕಿ ಹಾಕಿಕೊಂಡರು ಅದರೆ ಅವರ ಮರುಸ್ಥಾಪನೆ ಆಗಲಿಲ್ಲ. 20 ಮಂದಿ ಮೃತಪಟ್ಟರು ಸಹ ಕುಟುಂಬಕ್ಕೆ ಪರಿಹಾರ ದೊರೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಂದಾಯ ಗ್ರಾಮಗಳ ಸ್ಥಾಪನೆ, ಜಾತಿ, ಭೂಮಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಹೇಳಿದ್ದ ಸರ್ಕಾರಗಳು ಕಾರ್ಯರೂಪಕ್ಕೆ ತರಲಿಲ್ಲ. ಕೆರೆ ಅಂಚಿನಲ್ಲಿ ಸಾವು ನೋವುಗಳು ಸಂಭವಿಸುತ್ತಲೇ ಇವೆ. ಹೊಸ ಜನ್ಮ ಆಗುತ್ತಿಲ್ಲ ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರ ಗಮನಕ್ಕೆ ಇದ್ದು ಬಗೆಹರಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net