ಬಿಇಎಂಎಲ್​ನಿಂದ ಮಾದರಿ ಮೆಟ್ರೋ ರೈಲುಸೆಟ್​ ಬಿಡುಗಡೆ | BEML

ಪ್ರೊಟೊ ಟೈಪ್​ ಮೆಟ್ರೋ ಟ್ರೈನ್​
ಪ್ರೊಟೊ ಟೈಪ್​ ಮೆಟ್ರೋ ಟ್ರೈನ್​
Published on

ಪ್ರಮುಖ ಮುಖ್ಯಾಂಶಗಳು

  • 318 ಬೋಗಿಗಳ ನಿರ್ಮಾಣಕ್ಕೆ ಒಪ್ಪಂದ
  • ನೀಲಿ, ಗುಲಾಬಿ ಮಾರ್ಗಕ್ಕೆ ರೈಲುಗಳ ನಿರ್ಮಾಣ
  • 3,177 ಕೋಟಿ ರೂ.ಮೌಲ್ಯದ ಒಡಂಬಡಿಕೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರದ ಮೆಟ್ರೋ ಜಾಲ ವಿಸ್ತರಣೆಯ ಹಿನ್ನೆಲೆಯಲ್ಲಿ ಬಿಇಎಂಎಲ್​ ಸಂಸ್ಥೆ ಗುರುವಾರ ಆಧುನಿಕ ಚಾಲಕ ರಹಿತ ಮೆಟ್ರೋ ಟೆನ್​ಸೆಟ್​ (5ಆರ್​ಎಸ್​-ಡಿಎಂ) ಮಾದರಿಯನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​)ದ 2, 2ಎ ಮತ್ತು 2ಬಿ ಹಂತಗಳ ಹೊಸ ಕಾರಿಡಾರ್​ಗಳಿಗೆ ವಿನ್ಯಾಸಗೊಳಿಸಿರುವ ಪ್ರೋಟೋಟೈಪ್​ ಟ್ರೈನ್​ಸೆಟ್​ ಅನ್ನು ಬಿಎಂಆರ್​ಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಡಾ.ಜೆ.ರವಿಶಂಕರ್​ ಲೋಕಾರ್ಪಣೆಗೊಳಿಸಿದರು.
ಬಳಿಕ ಗಣ್ಯರು ರೈಲಿನ ಪ್ರಯೋಗಾತ್ಮಕ ಸಂಚಲನವನ್ನು ವೀಕ್ಷಿಸಿದರು.
ಬಿಎಂಆರ್​ಸಿಎಲ್​ನ ಯೋಜನೆಯಡಿ, ಬಿಇಎಂಎಲ್​ ಒಟ್ಟು 318 ಸ್ಟ್ಯಾಂಡರ್ಡ್​ ಗೇಜ್​ ಮೆಟ್ರೋ ಕೋಚ್​ಗಳನ್ನು ತಯಾರಿಸಲಿದ್ದು, ಅವುಗಳಲ್ಲಿ ನೀಲಿ ಮತ್ತು ಗುಲಾಬಿ ಮಾರ್ಗದ ರೈಲುಗಳು ಇವೆ. ಸಂಪೂರ್ಣ ವಿನ್ಯಾಸ, ಇಂಜಿನಿಯರಿಂಗ್​ ಮತ್ತು ತಯಾರಿಕಾ ಕಾರ್ಯಗಳು ಬೆಂಗಳೂರಿನಲ್ಲಿರುವ ಬಿಇಎಂಎಲ್​ ಘಟಕದಲ್ಲೇ ನಡೆಯುತ್ತಿವೆ. ಬಿಎಂಆರ್​ಸಿಎಲ್​ ವೇಳಾಪಟ್ಟಿಯ ಅನುಸಾರ ಈ ಹೊಸ ಟ್ರೆನ್​ಸೆಟ್​ಗಳು ಹಲವು ಹಂತಗಳ ಪರೀಕ್ಷೆ, ತಾಂತ್ರಿಕ ಪರಿಶೀಲನೆ ಮತ್ತು ಪ್ರಮಾಣೀಕರಣಕ್ಕೆ ಒಳಪಡುವುದಲ್ಲದೆ, ಸುಮಾರು 15 ವರ್ಷಗಳವರೆಗೆ ನಿರ್ವಹಣಾ ಸಾಮರ್ಥ್ಯ ಹೊಂದಲಿದೆ. ಸ್ಪರ್ಧಾತ್ಮಕ ಟೆಂಡರ್​ ಪ್ರಕ್ರಿಯೆಯ ಮೂಲಕ ಬಿಇಎಂಎಲ್​ಗೆ ಲಭ್ಯವಾದ 3,177 ಕೋಟಿ ರೂ.ಮೌಲ್ಯದ ಒಡಂಬಡಿಕೆಯ ಅನುಷ್ಠಾನದಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಬಿಇಎಂಎಲ್​ ಸಿಎಂಡಿ ಶಾಂತನು ರಾಯ್​ ಮಾತನಾಡಿ, ಚಾಲಕ ರಹಿತ ಮೆಟ್ರೋ ಮಾದರಿಯ ಅನಾವರಣವು ಬಿಇಎಂಎಲ್​ನ ಮುಂದಿನ ತಲೆಮಾರಿನ ನಗರ ಸಾರಿಗೆ ಪರಿಹಾರಗಳನ್ನು ಒದಗಿಸುವ ಪ್ರಯತ್ನದಲ್ಲಿ ದೊಡ್ಡ ಯೋಜನೆಯಾಗಿದೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ನಿಖರ, ವಿಶ್ವಾಸಾರ್ಹ ಮತ್ತು ಆಧುನಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಗತ್ಯವಿದೆ. ಬಿಎಂಆರ್​ಸಿಎಲ್​ ನಮಗೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ್ದಾರೆ ಎಂದರು.

ರೈಲಿನ ವಿಶೇಚತೆ

ಬಿಇಎಂಎಲ್​ ಅಭಿವೃದ್ಧಿಪಡಿಸಿದ ಹೊಸ ಚಾಲಕ ರಹಿತ ಮೆಟ್ರೋ ಟೆನ್​ಸೆಟ್​ನ ಒಳಾಂಗಣವನ್ನು ಆಧುನಿಕವಾಗಿ ನಿರ್ಮಿಸಲಾಗಿದೆ. ಅಗಲ ಗ್ಯಾಂಗ್​ವೇಗಳು, ಯುಎಸ್​ಬಿ ಚಾರ್ಜಿಂಗ್​ ಪೋರ್ಟ್​ಗಳು, ಸುಧಾರಿತ ಸುಲಭ ಪ್ರವೇಶ ಸೌಲಭ್ಯಗಳು ಹಾಗೂ ಅಂತಾರಾಷ್ಟ್ರೀಯ ಸುರಕ್ಷತಾ ಮಾನದಂಡಗಳು ಕೂಡಿವೆ. ಚಿಬಿಟಿಸಿ ತಂತ್ರಜ್ಞಾನಕ್ಕೆ ಹೊಂದಿಕೊಂಡಿರುವ ಈ ಟೆನ್​ಸೆಟ್​ ಸಂಪೂರ್ಣ ಚಾಲಕ ರಹಿತ ಸಂಚಲನಕ್ಕೆ ಸಿದ್ಧವಾಗಿರುವುದೇ ಪ್ರಮುಖ ವಿಶೇಷತೆಯಾಗಿದೆ. ಮಾದರಿ ರೋಲ್​ಔಟ್​ನೊಂದಿಗೆ ಯೋಜನೆಗೆ ಸಂಬಂಧಿಸಿದ ವಿತರಣಾ ಹಂತಗಳು ಆರಂಭವಾಗಿದ್ದು, ಸರಣಿ ಉತ್ಪಾದನೆ ಒಪ್ಪಂದಿತ ವೇಳಾಪಟ್ಟಿಯಂತೆ ಮುಂದುವರಿಯಲಿದೆ. ಬಿಇಎಂಎಲ್​ ಇತ್ತೀಚೆಗೆ ಬಿಎಂಆರ್​ಸಿಎಲ್​ನಿಂದ 414 ಕೋಟಿ ರೂ. ಹೆಚ್ಚುವರಿ ಆದೇಶ ಪಡೆದಿದ್ದು, ಹಳದಿ ಮಾರ್ಗಕ್​ಎಕ 6 ರೈಲುಗಳನ್ನು ಪೂರೈಸಲಿದೆ. ರೀಚ್​&6ಗಾಗಿ ಮೊದಲು ಪಡೆದ ಆದೇಶದೊಂದಿಗೆ ಒಟ್ಟು ಪೂರೈಕೆ 66 ಟೆನ್​ಸೆಟ್​ಗಳಿಗೆ ಏರಿಕೆ ಕಂಡಿದೆ.

ಈ ಮೊದಲ ಪ್ರೋಟೋಟೈಪ್​ ರೋಲ್​ಔಟ್​ ಬಿಇಎಂಎಲ್​ನ ಬದ್ಧತೆಯನ್ನು ಸ್ಪಷ್ಟಪಡಿಸುತ್ತದೆ. ಅತ್ಯಾಧುನಿಕ ರೈಲು ರೇಕುಗಳು ಪ್ರಯಾಣಿಕರ ಅನುಭವವನ್ನು ಹೆಚ್ಚು ಸುಧಾರಿಸಲಿದೆ. ಮುಂಬರುವ ಆರ್​&6 ಗುಲಾಬಿ ಮಾರ್ಗ ಮತ್ತು ಒಆರ್​ಆರ್​ ನೀಲಿ ಮಾರ್ಗದಲ್ಲಿ ಈ ರೈಲುಗಳು ಕಾರ್ಯಾಚರಣೆ ನಡೆಸಲಿದೆ. ನಗರಕ್ಕೆ ಗುಣಮಟ್ಟದ ಮೆಟ್ರೋ ಸೇವೆ, ಸಂಚಾರ ಸಿಕ್ಕಿನ ಸಮಸ್ಯೆ ಇಳಿಕೆ ಇತ್ಯಾದಿ ಮುಖ್ಯ ದ್ಯೇಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net