ಮೆಟ್ರೋ ರೈಲಿನೊಳಗೆ ರೀಲ್ಸ್ ಚಿತ್ರೀಕರಣ, ಆಹಾರ ಸೇವನೆ, ನೆಲದ ಮೇಲೆ ಕುಳಿತುಕೊಳ್ಳುವುದು ಅಥವಾ ಹೆಡ್ಫೋನ್ ಇಲ್ಲದೆ ಜೋರಾಗಿ ಸಂಗೀತ ಹಾಕಿ ಇತರರಿಗೆ ತೊಂದರೆ ನೀಡಿದರೆ, ಈ ಹಿಂದೆ ಇದ್ದ 500 ರೂ. ದಂಡವನ್ನು 2,500ರಿಂದ 10,000 ರೂ. ವರೆಗೆ ಹೆಚ್ಚಿಸಲಾಗಿದೆ. ಸಾಮಾಜಿಕ ಜಾಲತಾಣಗಳಿಗಾಗಿ ಮೆಟ್ರೋವನ್ನು ಚಿತ್ರೀಕರಣದ ತಾಣವನ್ನಾಗಿಸುವ ಪ್ರವೃತ್ತಿಗೆ ಇದು ಬ್ರೇಕ್ ಹಾಕುವ ಪ್ರಯತ್ನವಾಗಿದೆ.