ಜನರ ಬದುಕು ಬದಲಾಯಿಸುವ ವಿಶ್ವ ಭಾಷೆ ಸಂಗೀತ

ಸನ್ಮಾನ
ಸನ್ಮಾನ
Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ಡಾ.ಸಿ.ಎನ್​. ಮಂಜುನಾಥ್​ ಅಭಿಮತ
  • ವಾದ್ಯ ಕಲಾರತ್ನ' ಪ್ರಶಸ್ತಿ ಪ್ರದಾನ ಸಮಾರಂಭ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗು, ಹಾಸ್ಯ, ಮೌನ ಇತ್ಯಾದಿ ಹಲವು ವಿಶ್ವ ಭಾಷೆಗಳ ಜತೆಗೆ ಸಂಗೀತವೂ ಒಂದಾಗಿದೆ. ಅದಕ್ಕೆ ಜನರ ಜೀವನವನ್ನೇ ಬದಲಾಯಿಸುವ ಶಕ್ತಿ ಇದೆ ಎಂದು ಸಂಸದ ಡಾ.ಸಿ.ಎನ್​. ಮಂಜುನಾಥ್​ ಅಭಿಪ್ರಾಯಿಸಿದ್ದಾರೆ.
ಬೆಂಗಳೂರು ಗಾಯನ ಸಮಾಜದ ವತಿಯಿಂದ ನಗರದ ಗಾಯನ ಸಮಾಜದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ "ವಾದ್ಯ ವೈಭವ&2026' ಕಾರ್ಯಕ್ರಮದಲ್ಲಿ ಮೃದಂಗ ಕಲಾವಿದ ವಿದ್ವಾನ್​ ಶ್ರೀಮುಶ್ನಂ ವಿ.ರಾಜ ರಾವ್​ ಅವರಿಗೆ "ವಾದ್ಯ ಕಲಾರತ್ನ' ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಅರ್ಧ ಗಂಟೆ ಸಂಗೀತ ಶ್ರವಣ ಮಾಡುವುದರಿಂದ ಮನಸ್ಸಿನ ಎಲ್ಲ ಒತ್ತಡವನ್ನು ಕಡಿಮೆ ಮಾಡಿ, ಶಾಂತಿ ಹಾಗೂ ನೆಮ್ಮದಿಯನ್ನು ಪಡೆದುಕೊಳ್ಳಬಹುದು. ಔಷದದಲ್ಲಿ ಸಂತೋಷವಿಲ್ಲ ಆದರೆ, ಸಂಗೀತದಲ್ಲಿ ಔಷದವೂ ಸಂತೋಷವೂ ಎರಡು ಇದೆ. ನಮಗೆ ಬೇಸರವಾದಾಗ ನಡಿಗೆ, ಸಂಗೀತ ಮುಂತಾದ ಚಟುವಟಿಕೆಗಳ ಮೂಲಕ ನಿರಾಳತೆಯನ್ನು ಪಡೆಯಬಹುದು. ಅಲ್ಲದೆ, ಸಂಗೀತ ಉಪಾಸನೆಯಲ್ಲಿ ತೊಡಗಿರುವವರು ಸದಾ ಸಂಸ್ಕಾರವಂತರಾಗಿರುತ್ತಾರೆ ಎಂದು ಹೇಳಿದರು.
ಸನ್ಮಾನಿತರಾದ ವಿದ್ವಾನ್​ ಶ್ರೀಮುಶ್ನಂ ವಿ.ರಾಜ ರಾವ್​ ಮಾತನಾಡಿ, ನಮ್ಮ ಕೆಲಸವನ್ನು ಯಾವಾಗಲೂ ಶ್ರದ್ಧಾ ಭಕ್ತಿಯಿಂದ ಮಾಡಬೇಕು. ಬದುಕಿನಲ್ಲಿ ಯಾವ ಸಮಯಕ್ಕೆ ಏನು ನಡೆಯಬೇಕು ನಡೆಯುತ್ತಿರುತ್ತದೆ. ಗಾಯನ ಸಮಾಜದ ಜತೆಗೆ ನನಗೆ 45 ವರ್ಷದ ನಂಟಿದೆ. ಇಲ್ಲಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದು ಸಂತಸ ನೀಡಿದೆ. ಕಲಾಭಿಮಾನಿಗಳ ಪ್ರೋತ್ಸಾಹದಿಂದಲೇ ಕಲಾವಿದರು ಬೆಳೆಯುತ್ತಾರೆ. ಅಪಸವ್ಯ, ್ಯಾಷನ್​ ಹಿಂದೆ ಓಡದೆ ಕಲೆಯನ್ನು ಉಳಿಸಿಕೊಂಡು ಹೋಗುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೃದಂಗ ಕಲಾವಿದ ವಿದ್ವಾನ್​ ಶ್ರೀಮುಶ್ನಂ ವಿ.ರಾಜ ರಾವ್​ ಅವರಿಗೆ ಸಂಸದ ಡಾ.ಸಿ.ಎನ್​.ಮಂಜುನಾಥ್​ ಅವರು "ವಾದ್ಯ ಕಲಾರತ್ನ' ಪ್ರಶಸ್ತಿ ಪ್ರದಾನ ಮಾಡಿದರು.
ಗಾಯನ ಸಮಾಜದ ಅಧ್ಯಕ್ಷ ಡಾ.ಎಂ.ಆರ್​.ವಿ.ಪ್ರಸಾದ್​, ಉಪಾಧ್ಯಕ್ಷ ಅಚ್ಯುತ ರಾವ್​ ಪದಕಿ ಮತ್ತಿತರರಿದ್ದರು.

ಸಂಗೀತದ ಜ್ಞಾನ ಇಲ್ಲದವರಿಗೂ ಹೃದಯವನ್ನು ತಟ್ಟುವ ಸಾಮರ್ಥ್ಯ ಇರುವ ವಿಶಿಷ್ಟ ಕಲೆ ಇದಾಗಿದೆ.ಪಶು, ಪಗಳಿಗೂ ಅರ್ಥವಾಗುತ್ತದೆ. ಆದರೆ, ಸಂಗೀತದ ಆಳ ಎಷ್ಟಿದೆಯೆಂದರೆ ವಿದ್ವಾಂಸರಿಗೂ ಪೂರ್ತಿ ತಿಳಿದಿರುವುದಿಲ್ಲ. ಸಂಗೀತದಿಂದ ಮನಸ್ಸಿನ ಕ್ಲೇಷಗಳೆಲ್ಲವೂ ದೂರವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net