ಸರಿಸುಮಾರು 6 ವರ್ಷದಿಂದ ಸ್ಥಳೀಯ ಆಡಳಿತ ಇಲ್ಲದ ಕಾರಣ ನಗರದೊಳಗಿನ ವಾರ್ಡ್ ಮಟ್ಟದ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ಇವುಗಳಿಗೆ ತೇಪೆ ಹಾಕಿದ್ದರೂ, ಪ್ರತೀ ಮಳೆಗಾಲದಲ್ಲಿ ಬಾಯ್ತೆರೆದು ಅಪಾಯಕ್ಕೆ ಆಹ್ವಾನಿಸುತ್ತಿವೆ. ಅನುದಾನ ಕೊರತೆ, ನಿರ್ವಹಣೆಗೆ ಗಮನ ನೀಡದ ಕಾರಣ ವಾರ್ಡ್‌ಗಳಲ್ಲಿ ರಸ್ತೆ ಸಂಚಾರ ಹೈರಾಣವಾಗಿಸಿದೆ. ಇದಕ್ಕೀಗ ಒಮ್ಮಲೆ ಪರಿಹಾರ ಕೈಗೊಳ್ಳಲು ಸರ್ಕಾರ 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಸ್ತೆಜಾಲವನ್ನು ವೃದ್ಧಿಸಲು ಪಣ ತೊಟ್ಟಿದೆ.