ಸಮಗ್ರ ತಾಂತ್ರಿಕ ತಪಾಸಣೆ (ಮಿಡ್ಲೈಫ್ ಓವರ್&ಹಾಲ್) ರೈಲಿನ ಪ್ರತಿಯೊಂದು ಪ್ರಮುಖ ವ್ಯವಸ್ಥೆಯನ್ನೂ ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಹಾಳಾದ ಅಥವಾ ಸವೆದಿರುವ ಬಿಡಿಭಾಗಗಳನ್ನು ಬದಲಾಯಿಸಲಾಗುತ್ತದೆ. ಟ್ರಾಕ್ಷನ್ ಮೋಟಾರ್ ಹಾಗೂ ಡ್ರೆವ್ ವ್ಯವಸ್ಥೆ, ವಿದ್ಯುತ್ ಉಪಕರಣ, ಕೇಬಲ್ ಮತ್ತು ಬ್ಯಾಟರಿ, ಚಕ್ರ, ಆ್ಯಕ್ಸಲ್ ಹಾಗೂ ಬ್ರೇಕ್ ವ್ಯವಸ್ಥೆ, ಬಾಗಿಲು ಮತ್ತು ಪ್ರಯಾಣಿಕರ ಸುರಕ್ಷತಾ ವ್ಯವಸ್ಥೆ, ಹವಾನಿಯಂತ್ರಣ ಹಾಗೂ ಗಾಳಿ ಸಂಚಾರ ವ್ಯವಸ್ಥೆ, ಸಿಗ್ನಲಿಂಗ್, ನಿಯಂತ್ರಣ ಮತ್ತು ಎಲೆಕ್ಟ್ರಾನಿಕ್, ಆಸನ, ಒಳಾಂಗಣ ಹಾಗೂ ಬೋಗಿಯ ಇತರೆ ಉಪಕರಣ ವ್ಯವಸ್ಥೆ ಪರಿಶೀಲನೆಗೆ ಒಳಪಡಲಿದೆ.