ಲಂಡನ್ ಪ್ರವಾಸದಲ್ಲಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರಿಗೆ ಅಲ್ಲಿನ ಉದ್ಯಮಿಗಳು ಬರಮಾಡಿಕೊಂಡರು. ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಇದ್ದರು.
ಇಂಗ್ಲೆಂಡ್ ಪ್ರವಾಸದಲ್ಲಿರುವ ಸಚಿವ ಎಂ.ಬಿ.ಪಾಟೀಲ ಜತೆಗೆ ಮಾತುಕತೆ
ಹೂಡಿಕೆ ಆಸಕ್ತಿ ವ್ಯಕ್ತಪಡಿಸಿದ ಎಸ್‌ಸಿಐ ಕಂಪನಿಗೆ ಸೂಕ್ತ ನೆರವಿನ ಭರವಸೆ
ರಾಜ್ಯದ ತಯಾರಿಕಾ ಘಟಕ ವಿಸ್ತರಣೆಗೆ ವಿಯರ್ ಗ್ರೂಪ್ ಕಂಪನಿ ಅಪೇಕ್ಷೆ
ಬೆಂಗಳೂರು: ಸೆಮಿಕಂಡಕ್ಟರ್ಸ್ ವಲಯದಲ್ಲಿ ಇಂಗ್ಲೆಂಡ್‌ನ ಹೇಡನ್ ಪೋವಿ ಕಂಪನಿ ಸ್ಪಷ್ಟ ಹೆಜ್ಜೆ ಗುರುತು ಮೂಡಿಸುತ್ತಿದೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಜತೆಗೆ ಮಾತುಕತೆ ನಡೆಸಿದೆ. Minister M B Patil
ಕಂಪನಿ ಪರವಾಗಿ ಸಿಇಎ ಹೇಡನ್ ಪೋವಿ ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸಿದರು. ಸರ್ಕಾರದಿಂದ ಅಗತ್ಯವಾದ ಸಹಕಾರದ ಭರವಸೆಯನ್ನೂ ಪಡೆದುಕೊಂಡರು.
ಇದರಿಂದ ಕಂಪ್ಯೂಟರ್ ಸುರಕ್ಷತೆಗೆ ಅಗತ್ಯವಿರುವ ಅಂತರ್ಗತ ಸುರಕ್ಷೆಯನ್ನು ಹೊಂದಿರುವ ಮೈಕ್ರೋಪ್ರೊಸೆಸರ್‌ಗಳ ತಯಾರಿಕೆ ಸ್ಥಳೀಯವಾಗಿ ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಸ್ಯಾಮ್ಕೋ ಹೋಲ್ಡಿಂಗ್ಸ್ ಕಂಪನಿಯು ರಾಜ್ಯದ ಮರುಬಳಕೆ ಇಂಧನ, ಎಥನಾಲ್ ಉತ್ಪಾದನೆ, ಬ್ಯಾಟರಿ ತಯಾರಿ ವಲಯಗಳಲ್ಲಿ ಹೂಡಿಕೆಗೆ ಮುಂದಾಗಿದೆ.
ಲೇಟೋಸ್ ಡೇಟಾ ಸೆಂಟರ್ ಕಂಪನಿಯು ಕೃತಕ ಬುದ್ಧಿಮತ್ತೆ ಕ್ಷೇತ್ರಕ್ಕೆ ಸಂಬಂಧಿಸಿದ ಇನ್‌ಕ್ಯುಬೇಷನ್ ಸೆಂಟರ್ ಸ್ಥಾಪನೆಗೆ ಅಪೇಕ್ಷಿಸಿದ್ದು, ಕ್ವಿನ್ ಸಿಟಿಯಲ್ಲಿ ಸ್ಥಳಾವಕಾಶದ ಭರವಸೆ ನೀಡಲಾಗಿದೆ.
ಇದೇ ಸಂದರ್ಭದಲ್ಲಿ ಕೇಂಬ್ರಿಡ್ಜ್ ಮತ್ತು ಬೆಂಗಳೂರು ನಗರಗಳೆರಡೂ ಸೆಮಿಕಂಡಕ್ಟರ್ ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಹಾಗೂ ಪ್ರತಿಭಾವಂತ ಯುವಜನರನ್ನು ಹೊಂದಿರುವುದನ್ನು ಚರ್ಚಿಸಲಾಗಿದೆ ಎಂದಿದ್ದಾರೆ.
ವಿಯರ್ ಗ್ರೂಪ್ ಕಂಪನಿಯು ಗಣಿಗಾರಿಕೆ, ಖನಿಜ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದು, ಬೆಂಗಳೂರು ಸಮೀಪದ ತನ್ನ ತಯಾರಿಕಾ ಘಟಕವನ್ನು ಮತ್ತಷ್ಟು ವಿಸ್ತರಣೆಗೆ ಉತ್ಸುಕವಾಗಿದೆ. ಕೈಗಾರಿಕಾ ನೀತಿಯಂತೆ ಬೆಂಬಲ ನೀಡುವ ಭರವಸೆ ನೀಡಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.