ಬಿಕ್ಕಟ್ಟು ನಿವಾರಣೆಗೆ ಪೂರಕ ಚರ್ಚೆ ಆಗಲಿ

ಗಾಂಧಿ ಭವನದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ದೇಶಿ ಟ್ರಸ್ಟ್​ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಲೇಖಕ ಪ್ರಸನ್ನ ಕೃತಿ ಬಿಡುಗಡೆಗೊಳಿಸಿದರು. ಸಾಮಾಜಿಕ ಹೋರಾಟಗಾರ್ತಿ ಜಯಂತಿ ಇದ್ದರು.
ಗಾಂಧಿ ಭವನದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ದೇಶಿ ಟ್ರಸ್ಟ್​ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಲೇಖಕ ಪ್ರಸನ್ನ ಕೃತಿ ಬಿಡುಗಡೆಗೊಳಿಸಿದರು. ಸಾಮಾಜಿಕ ಹೋರಾಟಗಾರ್ತಿ ಜಯಂತಿ ಇದ್ದರು.
Published on
ಬೆಂಗಳೂರು: ಎದುರಾಗಿರುವ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳಲು ಪೂರಕ ಚರ್ಚೆ ಆಗಬೇಕಿದೆ. ಈ ಬಗ್ಗೆ ಹಲವು ಲೇಖಕರು ಪುಸ್ತಕದ ರೂಪದಲ್ಲೂ ಸಲಹೆ ಸೂಚನೆ ನೀಡಿದ್ದು, ಪಾಲಿಸಬೇಕಾದ ಅಗತ್ಯವಿದೆ ಎಂದು ಲೇಖಕ ಪ್ರಸನ್ನ ತಿಳಿಸಿದ್ದಾರೆ.
ನಗರದ ಗಾಂಧಿನ ಭವನದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ದೇಶಿ ಟ್ರಸ್ಟ್​ ಭಾನುವಾರ ಹಮ್ಮಿಕೊಂಡಿದ್ದ "ಇಂದಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಗಾಂಧೀಜಿ' ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, ಹಲವು ಮಹನೀಯರ ಹೋರಾಟ, ತ್ಯಾಗದ ಲದಿಂದ ದೇಶಕ್ಕೆ ಸ್ವಾತಂತ್ರ$್ಯ ಬಂದಿದೆ. ಬದಲಾಗುತ್ತಿರುವ ಕಾಲದಲ್ಲಿ ಎದುರಾಗಿರುವ ಬಿಕ್ಕಟ್ಟುಗಳ ನಿವಾರಣೆ ಹೊಣೆ ನಮ್ಮೆಲ್ಲರ ಮೇಲಿದೆ. ಯುವ ಪೀಳಿಗೆ ಪುಸ್ತಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಜೆ.ಎಸ್​. ಜಯದೇವ್​ ಮಾತನಾಡಿ, ಬಿಕ್ಕಟ್ಟು ಎದುರಾದಾಗ ಹೇಗೆ ನಿಯಂತ್ರಿಸಬೇಕು, ಇದಕ್ಕೆ ಕಾರಣ ಏನು ಎಂಬುದನ್ನು ಹುಡುಕಾಡುವ ಮನಸ್ಥಿತಿ ಬದಲಾಗಬೇಕು. ಆಧ್ಯಾತ್ಮಿಕ ಮನೋಭಾವನೆಯಿಂದ ಬಿಕ್ಕಟ್ಟು ಎದುರಾಗದಂತೆ ಎಚ್ಚರ ವಹಿಸುವುದು ಸೂಕ್ತ ಎಂದರು.
ಹವಮಾನ ವೈಪರಿತ್ಯದಿಂದ ರೈತ ಬೆಳೆದ ಬೆಳೆಗಳ ಮೇಲೆ ಪರಿಣಾಮ ಬೀರುತ್ತದೆ. ಮಲೆನಾಡು ಪ್ರದೇಶದಲ್ಲಿ ಮಣ್ಣಿನ ಸವಕಳಿ, ಕಾಡು ನಾಶ ಹೀಗೆ ಹಲವು ಸಮಸ್ಯೆ ಎದುರಾಗುತ್ತದೆ. ಎಲ್ಲ ಬಿಕ್ಕಟ್ಟುಗಳನ್ನು ನಿವಾರಿಸಿಕೊಳ್ಳಲು ಅವಕಾಶ ನಮ್ಮ ಬಳಿಯಿದ್ದರೂ ಮುಂದಾಗದೆ ಇರುವುದು ವಿಷಾದನೀಯ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇದೇ ವೇಳೆ ಲೇಖಕ ಹುತಾತ್ಮನ ಮಗಳು, ಸಂಗಪ್ಪ ಮಂಟೆ ಕೃತಿ ಬಿಡುಗಡೆಗೊಳಿಸಲಾಯಿತು. ಲೇಖಕರಾದ ಡಾ. ಎ.ಆರ್​. ವಾಸವಿ, ಡಾ. ಕೆ.ಪ್ರಕಾಶ್​, ಮಂಜುನಾಥ್​ ಚಾಂದ್​, ಕೈಮಗ್ಗ ಉದ್ಯಮಿ ಪವಿತ್ರಾ, ಸಾಮಾಜಿಕ ಹೋರಾಟಗಾರ್ತಿಯರಾದ ಉಷಾ, ಜಯಂತಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net