ಲೇಖಕರು ಕಳೆದ 3-4 ವರ್ಷಗಳಿಂದ ಸರ್ಕಾರಿ ದಾಖಲೆಗಳನ್ನು ಸಂಗ್ರಹಿಸಿ, ಡಾ. ರಾಜ್‌ಕುವಾರ್, ದಿ. ನಟಿ ಲೀಲಾವತಿ, ನಟ ವಿನೋದ್ ರಾಜ್ ಹಾಗೂ ದಿ. ಮಹಾಲಿಂಗ ಭಾಗವತರ್ ಅವರ ಕುರಿತು ಲಭ್ಯವಿರುವ ವಿವಿಧ ದಾಖಲೆಗಳನ್ನು ಅಧ್ಯಯನ ವಾಡಿದ್ದಾರೆ. ಚೆನ್ನೈ ಹಾಗೂ ಚಂಗಲ್ಪಟ್ಟು ಜಿಲ್ಲೆಗಳಲ್ಲಿನ ಸ್ವತ್ತುಗಳಿಗೆ ಸಂಬಂಧಿಸಿದ ತೀರುವಳಿ ಪತ್ರ, ಕ್ರಯಪತ್ರ, ದಾನಪತ್ರ, ಪಟ್ಟಾ ಸೇರಿ ಇತರ ಅಧಿಕೃತ ದಾಖಲೆಗಳನ್ನು ಕಲೆಹಾಕಿ, ಕಳೆದ ಫೆಬ್ರವರಿಯಲ್ಲಿ ವಾಧ್ಯಮಗಳ ಮುಂದೆ ಬಿಡುಗಡೆ ವಾಡಲಾಗಿತ್ತು. ಅದೇ ದಾಖಲೆಗಳ ಆಧಾರದಲ್ಲಿ ಈ ಕೃತಿ ರಚಿಸಲಾಗಿದೆ ಎಂದು ತಿಳಿಸಲಾಯಿತು.