ಪ.ಜಾತಿ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಮೀಸಲಾತಿ ಕೋರಿರುವ ಅಭ್ಯರ್ಥಿಗಳು ಆರ್‌ಡಿ ಸಂಖ್ಯೆ ಇರುವ, ತಹಶೀಲ್ದಾರರಿಂದ ವಿತರಿಸಲ್ಪಟ್ಟ ಪ್ರಮಾಣ ಪತ್ರವನ್ನು ದಾಖಲೆ ಪರಿಶೀಲನೆ ವೇಳೆ ಕಡ್ಡಾಯವಾಗಿ ಹಾಜರುಪಡಿಸಬೇಕು. ಒಂದು ವೇಳೆ ಹಾಜರುಪಡಿಸದಿದ್ದಲ್ಲಿ ಪ್ರಮಾಣ ಪತ್ರ ನೀಡಲಾಗುವುದಿಲ್ಲ. ಹಾಗೂ ಆ ಪ್ರವರ್ಗಕ್ಕೆ ನಿಗದಿಯಾಗಿರುವ ಸ್ಲಾಟ್ಗಳನ್ನು ಭರ್ತಿ ಮಾಡಲು ಅವರ ನಂತರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿಯಮ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.