ನೇಮಕಾತಿ ಅಕ್ರಮ ತಡೆಗೆ ಮೂರು ಪದರದ ಒಎಂಆರ್ ಜಾರಿಗೆ ಕೆಇಎ ಚಿಂತನೆ: KEA Exam new rule

ಚಿಂತನೆ ನಡೆಸಿರುವ ಹೊಸ ನಿಯಮದ ಪ್ರಕಾರ, ಪರೀಕ್ಷೆ ಮುಗಿದ ನಂತರ ಮೂಲ ಒಎಂಆರ್ ಅನ್ನು ಕೆಇಎಗೆ ಸಲ್ಲಿಕೆಯಾಗುತ್ತದೆ. ಎರಡನೇ ಪ್ರತಿಯನ್ನು ಅಭ್ಯರ್ಥಿಯ ಪ್ರತಿಯಾಗಿದ್ದು, ಮೂರನೇ ಪ್ರತಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗಳ ಸ್ಟ್ರಾಂಗ್ ರೂಮ್‌ನಲ್ಲಿ ಸಂಗ್ರಹಿಸಿಡಲಾಗುತ್ತದೆ
Karnataka Examinations Authority
ಕರ್ನಾಟಕ ಪರೀಕ್ಷಾ ಪ್ರಾಧಿಕಾರkea website
Published on: 

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ), ಪರೀಕ್ಷಾ ಅಕ್ರಮಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವುದಕ್ಕಾಗಿ ಮೂರು ಪದರದ ಒಎಂಆರ್ ಶೀಟ್ ಅನ್ನು ಪರಿಚಯಿಸಲು ಚಿಂತನೆ ನಡೆಸುತ್ತಿದೆ.

ಪ್ರಸ್ತುತ ಎರಡು ಪದರದ ಒಎಂಆರ್ ಶೀಟ್ ನೀಡುವ ವ್ಯವಸ್ಥೆ ಇದೆ. ಮೂಲ ಪ್ರತಿಯನ್ನು ಪರೀಕ್ಷಾ ಪ್ರಾಧಿಕಾರದ ಬಳಿ ಇರುತ್ತದೆ. ಕಾರ್ಬನ್ ಪ್ರತಿಯನ್ನು ಅಭ್ಯರ್ಥಿಗೆ ನೀಡಲಾಗುತ್ತಿದೆ. ಆದರೆ, ಚಿಂತನೆ ನಡೆಸಿರುವ ಹೊಸ ನಿಯಮದ ಪ್ರಕಾರ, ಪರೀಕ್ಷೆ ಮುಗಿದ ನಂತರ ಮೂಲ ಒಎಂಆರ್ ಅನ್ನು ಕೆಇಎಗೆ ಸಲ್ಲಿಕೆಯಾಗುತ್ತದೆ. ಎರಡನೇ ಪ್ರತಿಯನ್ನು ಅಭ್ಯರ್ಥಿಯ ಪ್ರತಿಯಾಗಿದ್ದು, ಮೂರನೇ ಪ್ರತಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗಳ ಸ್ಟ್ರಾಂಗ್ ರೂಮ್‌ನಲ್ಲಿ ಸಂಗ್ರಹಿಸಿಡಲಾಗುತ್ತದೆ ಎಂದು ತಿಳಿದು ಬಂದಿದೆ.

ಪ್ರಾಯೋಗಿಕ ಜಾರಿ:

ಕೆಎಸ್‌ಆರ್‌ಪಿ ಸೇರಿ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳಿಗೆ ಸೆ.20ರಂದು ನಡೆದ ಪರೀಕ್ಷೆಯಲ್ಲಿ ಮೂರು ಪದರದ ಒಎಂಆರ್ ನಿಯಮವನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದ್ದು, ಯಶಸ್ವಿಯಾಗಿ ಪರೀಕ್ಷೆ ಮುಗಿದಿದೆ. ಇದೇ ನಿಯಮವನ್ನು ಮುಂಬರುವ ಪರೀಕ್ಷೆಗಳಲ್ಲಿಯೂ ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಕೆಇಎ ಮೂಲಗಳು ತಿಳಿಸಿವೆ.

ಹೊಸ ನಿಯಮ ಜಾರಿಗೆ ಕೆಪಿಎಸ್‌ಸಿ ಕಾರಣ?

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿಗಳಲ್ಲಿ ಒಎಂಆರ್ ತಿದ್ದಿರುವ ಆರೋಪಗಳು ಕೇಳಿಬಂದಿವೆ. ಈ ಸಂಬಂಧ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವ ಮೂಲಕ ತನಿಖೆಯನ್ನು ಪ್ರಾರಂಭಿಸಿದೆ. ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ಒಎಂಆರ್ ಶೀಟ್‌ಗಳನ್ನು ತಿರುಚಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಕೆಲವು ಅಭ್ಯರ್ಥಿಗಳು ಒಎಂಆರ್ ಹಾಳೆಗಳಲ್ಲಿನ ವೃತ್ತಗಳನ್ನು ಖಾಲಿ ಬಿಟ್ಟಿದ್ದರು ಮತ್ತು ನಂತರ ಹೆಚ್ಚಿನ ಅಂಕಗಳನ್ನು ಗಳಿಸಿ ಹುದ್ದೆಗಳನ್ನು ಪಡೆಯಲು ಅಕ್ರಮ ಮಾರ್ಗಗಳ ಮೂಲಕ ಅವುಗಳನ್ನು ಭರ್ತಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಹೊಸ ನಿಯಮ ಜಾರಿಯಾದರೆ, ಮೂಲ ಪ್ರತಿ ಜತೆಗೆ ಇನ್ನೆರಡು ಪ್ರತಿಗಳು ಜಿಲ್ಲಾಧಿಕಾರಿ ಮತ್ತು ಪರೀಕ್ಷಾ ಪ್ರಾಧಿಕಾರದಲ್ಲಿ ಇರಲಿದೆ. ಅವಶ್ಯ ಎನಿಸಿದ್ದಲ್ಲಿ ಮೂರೂ ಪ್ರತಿಯನ್ನು ಪರಿಶೀಲಿಸಿದರೆ, ತನಿಖೆಗೆ ನಡೆಸಲು ಮತ್ತು ನಿಖರ ಮಾಹಿತಿಯನ್ನು ಕಲೆ ಹಾಕಲು ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net