ಒಡೆಯ ಚಿತ್ರದ ನಟ ನಿರಂಜನ್ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ
ಬಾರ್ನಲ್ಲಿ ಹಲ್ಲೆ ನಡೆಸಿ ಪರಾರಿಯಾದ ಅಪರಿಚಿತರು, ಪೊಲೀಸ್ ಠಾಣೆಯಲ್ಲಿ ದೂರು
ಅಪರಿಚಿತ ವ್ಯಕ್ತಿಯಿಂದ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಆರೋಪ
ಬೆಂಗಳೂರು: ಒಡೆಯ (Odeya Kannada Cinema) ಚಿತ್ರದಲ್ಲಿ ನಟ ದರ್ಶನ್ ತಮ್ಮನ ಪಾತ್ರದಲ್ಲಿ ಅಭಿನಯಿಸಿದ್ದ ನಿರಂಜನ್ ಸದ್ಯ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಂಗಳೂರಿನ ಬಾರ್ವೊಂದರಲ್ಲಿ ಅವರ ಮೇಲೆ ಬಾಟಲ್ನಿಂದ ಹಲ್ಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಮಾರ್ಚ್28ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
2017ರಲ್ಲಿ ಜಲ್ಸಾ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಿರಂಜನ್, ಟಗರು, ವಾಸು ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿ, ಚಿತ್ರರಂಗದಲ್ಲಿ ಚಿರಪರಿಚಿತರಾಗಿದ್ದಾರೆ.
ಕೇಸ್ ದಾಖಲು
ಉತ್ತರ ಹಳ್ಳಿಯ ಮಂತ್ರಿ ಅಲೈಯನ್ಸ್ ಅಪಾರ್ಟ್ಮೆಂಟ್ ಬಳಿಯ ಕ್ಯಾಂಟನ್ ಬಾರ್ ಮತ್ತು ಕಿಚನ್ ಬಾರ್ನಲ್ಲಿ ಈ ಘಟನೆ ನಡೆದಿದೆ. ನಟ ನಿರಂಜನ್ ದೂರಿನ ಆಧಾರದ ಮೇಲೆ ಸುಬ್ರಮಣ್ಯಪುರ ಪೊಲೀಸರು ಸದ್ಯ ಕೇಸ್ ದಾಖಲಿಸಿಕೊಂಡಿದ್ದಾರೆ. ಘಟನೆಯಲ್ಲಿ ಭಾಗಿಯಾದವರಿಗಾಗಿ ತನಿಖೆ ಮುಂದುವರೆಸಿದ್ದಾರೆ.
ನಡೆದಿದ್ದೇನು?
ದೂರಿನ ಪ್ರಕಾರ, ನಿರಂಜನ್ ಅವರು ಮಾ.28ರಂದು ಮಧ್ಯಾಹ್ನ 2 ಗಂಟೆಗೆ ಯಾವುದೋ ಕೆಲಸದ ವಿಚಾರಕ್ಕೆನಟ ಯಶಸ್ ಸೂರ್ಯ ಅವರ ನಿವಾಸಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ ಟೂವಿಲರ್ನಲ್ಲಿ ಹೊರಟಿದ್ದಾಗ ದಾರಿ ಮಧ್ಯೆ ನೀರು ಕುಡಿಯಬೇಕು ಎನಿಸಿದ ಕಾರಣ ಅಲ್ಲಿ ಕಂಡುಬಂದ ಕ್ಯಾಂಟನ್ ಬಾರ್ ಮತ್ತು ಕಿಚನ್ ಬಳಿ ಗಾಡಿ ನಿಲ್ಲಿಸಿದ್ದರಂತೆ. ಈ ವೇಳೆ ಅಲ್ಲಿಗೆ ಇನ್ನೋವಾ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಅವರನ್ನು ನೂಕಿದ್ದಾರೆ.