ಬೆಂಗಳೂರು: ನಗರದ ನೈಋತ್ಯ ರೈಲ್ವೆ ಕೋಚಿಂಗ್ ಘಟಕಕ್ಕೆ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್ ಸೋಮವಾರ ಭೇಟಿ ನೀಡಿ, ಚಟುವಟಿಕೆಗಳ ಕುರಿತು ಪರಿಶೀಲಿಸಿದರು. ಸಿಕ್ ಲೈನ್, ಐಸಿಎ್, ಎಲ್ಎಚ್ಬಿ ಕೋಚ್ಗಳಿಗೆ ಓವರ್ ಹಾಲಿಂಗ್, ಎಸ್ಎಸ್-1 ಮಾರ್ಗ, ಉಗ್ರಾಣ, ಸಿಬ್ಬಂದಿ ಕುಂದುಕೊರತೆ ಅಲಿಸಿ, ಮೂಲಸೌಕರ್ಯ ಕುರಿತು ವೀಸಿದರು. ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವಿಧ ಹೊಸ ರೈಲು ಮಾರ್ಗ ಯೋಜನೆಗಳು, ನಿಲ್ದಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಭೂಸ್ವಾಧಿನದ ಪ್ರಗತಿಯ ಕುರಿತು ಚರ್ಚಿಸಿ, ಕಾರ್ಯಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.