ಬೆಂಗಳೂರು: ಆರೋಗ್ಯಕರ ಜೀವನಶೈಲಿ ಹಾಗೂ ಗುಣಮಟ್ಟದ ಆಹಾರ ಮಹತ್ವವನ್ನು ಜನಸಾಮಾನ್ಯರಿಗೆ ಅರಿವು ಮೂಡಿಸುವ ಉದ್ದೇಶಸಿಂದ ‘ಆರೋಗ್ಯಕ್ಕಾಗಿ ಮನೆಯಂಗಳದ ಕೈತೋಟ’ ಕುರಿತು ಒಂದು ದಿನದ ಶುಲ್ಕಸಹಿತ ತರಬೇತಿ ಕಾರ್ಯಕ್ರಮವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ (ಯುಎಎಸ್-ಬಿ) ತೋಟಗಾರಿಕೆ ವಿಭಾಗವು ಆಯೋಜಿಸಿದೆ.
ಈ ತರಬೇತಿಯಲ್ಲಿ ಮನೆಯಂಗಳದಲ್ಲಿ ಸೊಪ್ಪು, ತರಕಾರಿ ಔಷಧ ಮತ್ತು ಸುಗಂಧ್ರವ್ಯ ಸಸ್ಯಗಳ ಬೆಳವಣಿಗೆ, ಸಾವಯವ ಗೊಬ್ಬರದ ತಯಾರಿಕೆ, ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ, ನೀರಿನ ಸಮರ್ಪಕ ಬಳಕೆ ಇತ್ಯಾದಿ ಕುರಿತು ಪ್ರಾಯೋಗಿಕ ಹಾಗೂ ತಾಂತ್ರಿಕ ಮಾಹಿತಿಯನ್ನು ತಜ್ಞರು ನೀಡಲಿದ್ದಾರೆ.
ಈ ತರಬೇತಿಗೆ ಬಹು ಬೇಡಿಕೆ ಇರುವುದರಿಂದ ಶುಲ್ಕಸಹಿತ ತರಬೇತಿಯನ್ನು ಆಸಕ್ತಿವುಳ್ಳ 30 ಮಂದಿಗೆ ಆ.12ರಂದು ಆಯೋಜಿಸಲಾಗುತ್ತಿದೆ. ತರಬೇತಿ ಸಾಮಗ್ರಿ ಜತೆಗೆ ನೋಂದಣಿ ಶುಲ್ಕ 1,180 ರೂ. ಆಗಿರುತ್ತದೆ. ಹೆಸರು ನೋಂದಾಯಿಸಲು ಆ.2ರಂದು ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ವಿವಿಯ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಯುಎಎಸ್-ಬಿ ಅಧಿಕಾರಿಗಳು ತಿಳಿಸಿದ್ದಾರೆ.