ರೆಸಿಸ್ಟೋಗ್ರಾಫ್, ಸೋನಿಕ್ ಟೊಮೊಗ್ರಫಿ, ಎಲೆಕ್ಟ್ರಿಕಲ್ ರೆಸಿಸ್ಟೆನ್ಸ್ ಟೊಮೊಗ್ರಫಿ ಹಾಗೂ ಟ್ರೀ-ಮೋಷನ್ ವಿಶ್ಲೇಷಣೆ ಸೇರಿ ಹಲವು ನೂತನ ತಂತ್ರಜ್ಞಾನಗಳ ಮೂಲಕ ಮರಗಳ ಒಳರಚನೆ, ಬೇರುಗಳ ಬಲ, ಕಾಂಡದ ಸ್ಥಿರತೆ ಹಾಗೂ ಗಾಳಿಯ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಈ ಪರೀಕ್ಷೆಗಳ ಆಧಾರದ ಮೇಲೆ ಯಾವ ಮರಗಳು ಅಪಾಯದ ಸ್ಥಿತಿಯಲ್ಲಿವೆ, ಯಾವ ಮರಗಳಿಗೆ ವಿಶೇಷ ನಿರ್ವಹಣೆಯ ಅಗತ್ಯ ಮತ್ತು ಯಾವ ಮರಗಳನ್ನು ತೆರವುಗೊಳಿಸಬೇಕಾಗಬಹುದು ಎಂಬುದನ್ನು ನಿರ್ಧರಿಸಬಹುದು.