ಉಪನಗರ ರೈಲು ಯೋಜನೆಗೆ ಹಸಿರುನಿಶಾನೆ | k ride

ಉಪನಗರ ರೈಲು
ಉಪನಗರ ರೈಲು
Published on

ಪ್ರಮುಖ ಮುಖ್ಯಾಂಶಗಳು

  • ಕೆಎಸ್​ಆರ್​-ಕೆಐಎ ಮಾರ್ಗಕ್ಕೆ ಕೇಂದ್ರ ರೈಲ್ವೆ ಇಲಾಖೆ ಅನುಮೋದನೆ
  • 2030ರ ವೇಳೆಗೆ ಜನಬಳಕೆಗೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರದ ಕೆಎಸ್​ಆರ್​ ರೈಲು ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ)  ನಿರ್ಮಾಣವಾಗಲಿರುವ ಉಪನಗರ ರೈಲು ಸಂಪರ್ಕ ಯೋಜನೆಗೆ ಕೇಂದ್ರ ರೈಲ್ವೆ ಇಲಾಖೆ ಅನುಮೋದನೆ ನೀಡಿದ್ದು, ಯೋಜನೆಯ ಅಂತಿಮ ವಿನ್ಯಾಸಕ್ಕೆ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-&ರೈಡ್​) ಒಪ್ಪಿಗೆ ಸೂಚಿಸಿದೆ.
ಕೆಎಸ್​ಆರ್​ ರೈಲು ನಿಲ್ದಾಣದಿಂದ ಯಶವಂತಪುರ, ಯಲಹಂಕ ಮೂಲಕ ಟ್ರಂಪೆಟ್​ ಇಂಟರ್​ಚೇಂಜ್​ ಬಳಿ ತಿರುವು ಪಡೆದು, ಬಿ.ಕೆ. ಹಳ್ಳಿ ಮತ್ತು ಏರೋಸ್ಪೇಸ್​ ಪಾರ್ಕ್​ ಮೂಲಕ ಕೆಂಪೇಗೌಡ ವಿಮಾನ ನಿಲ್ದಾಣವರೆಗೆ ರೈಲುಮಾರ್ಗ ನಿಮಾಣವಾಗಲಿದೆ. ಯೋಜನೆ 2030ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಗುರಿ ನಿಗದಿ: 149 ಕಿ.ಮೀ. ಉದ್ದದ ಉಪನಗರ ರೈಲು ಜಾಲವನ್ನು ವೇಗವಾಗಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. 2&3 ವರ್ಷಗಳಲ್ಲಿ ಕಾರ್ಯಗತಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ. ಅದರಂತೆ, ಬೈಯಪ್ಪನಹಳ್ಳಿ& ಚಿಕ್ಕಬಾಣಾವರ ನಡುವಿನ ಕಾರಿಡಾರ್​&2 ಅನ್ನು 2028ರ ಡಿಸೆಂಬರ್​ಗೆ, ಹೀಲಲಿಗೆ&ರಾಜಾನುಕುಂಟೆ ಕಾರಿಡಾರ್​-&4 ಅನ್ನು 2029ರ ಮಾರ್ಚ್​ ಅಥವಾ ಜೂನ್​ಗೆ ಹಾಗೂ ಕೆಎಸ್​ಆರ್​ ಬೆಂಗಳೂರು-&ದೇವನಹಳ್ಳಿ ವಿಮಾನ ನಿಲ್ದಾಣ ಕಾರಿಡಾರ್​&1 ಮತ್ತು ಕೆಂಗೇರಿ&ವೈಟ್​ಫೀಲ್ಡ್​ ಕಾರಿಡಾರ್​&3 ಅನ್ನು 2030ರ ಮಾರ್ಚ್​ಗೆ ಆರಂಭಿಸುವ ಗುರಿ ಹೊಂದಲಾಗಿದೆ.
ರ್ಟಮಿನಲ್​ ನಿಮಾರ್ಣಕ್ಕೆ ಸಿದ್ಧತೆ: ನಗರ ಕೇಂದ್ರವನ್ನು ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಕಾರಿಡಾರ್​&1ರ ಮಾರ್ಗ ಅನುಮೋದನೆಯಾದ ಬಳಿಕ, ಅಗತ್ಯ ಜಮೀನಿನ ಮೌಲ್ಯಮಾಪನ ಮತ್ತು ಸ್ವಾಧಿನ ಪ್ರಕ್ರಿಯೆ ಆರಂಭವಾಗಲಿದೆ. ಈ ಪ್ರಕ್ರಿಯೆಗೆ ಸುಮಾರು ಒಂದು ವರ್ಷ ಕಾಲ ನಡೆಯಲಿದೆ. ಯಶವಂತಪುರ, ಲೊಟ್ಟೆಗೊಳ್ಳಹಳ್ಳಿ ಮತ್ತು ಹೆಬ್ಬಾಳ ಪ್ರದೇಶಗಳಲ್ಲಿ ಪ್ರಾಥಮಿಕ ಕಾಮಗಾರಿಗಳು ಈಗಾಗಲೆ ನಡೆಯುತ್ತಿವೆ. ಕಾಂಟೋನ್​ಮೆಂಟ್​ನಲ್ಲಿ ಉಪನಗರ ರೈಲು ರ್ಟಮಿನಲ್​ ನಿಮಾರ್ಣಕ್ಕೆ ಸಿದ್ಧತೆ ನಡೆದಿದೆ.
ಯೋಜನೆಯ ವೆಚ್ಚ ಹೆಚ್ಚಳ ಸಾಧ್ಯತೆ
ಯೋಜನೆಯ ವೆಚ್ಚವನ್ನು 15,767 ಕೋಟಿ ರೂ.ನಿಂದ 16,876 ಕೋಟಿ ರೂ.ಗೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ವಿಳಂಬದಿಂದ ಮತ್ತಷ್ಟು ವೆಚ್ಚ ಏರಿಕೆಯಾಗುವ ಸಾಧ್ಯತೆ ಇದೆ. ಎಲ್ಲ ಟೆಂಡರ್​ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಅಂತಿಮ ಅಂದಾಜು ನಿಗದಿಯಾಗಲಿದೆ. ಜರ್ಮನಿಯ ಕೆಎಫ್​ಡಬ್ಲ್ಯೂ ಮತ್ತು ಯುರೋಪಿಯನ್​ ಇನ್ವೆಸ್ಟ್​ಮೆಂಟ್​ ಬ್ಯಾಂಕ್​ ಸೇರಿ ವಿದೇಶಿ ಹಣಕಾಸು ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಹಣಕಾಸು ನೆರವು ನೀಡಲಿದ್ದರೂ, ಪ್ರಸ್ತುತ ಸರ್ಕಾರದ ಬಂಡವಾಳ ಹೂಡಿಕೆಯಿಂದಲೇ ಕಾಮಗಾರಿ ಮುಂದುವರಿಯಲಿದೆ. 
ಬಹುಮಾಧ್ಯಮ ಸಾರಿಗೆ ಕೇಂದ್ರ
ಉಪನಗರ ರೈಲು ಸೇವೆ ಆರಂಭಕ್ಕೆ ಆರು ಕೋಚ್​ಗಳ ರೈಲುಗಳನ್ನು ಬಳಸಲಾಗುತ್ತಿದ್ದು, ಪ್ರಯಾಣಿಕರ ಬೇಡಿಕೆಯಂತೆ ಒಂಬತ್ತು ಕೋಚ್​ಗಳಿಗೆ ವಿಸ್ತರಣೆ ಮಾಡಲಾಗುತ್ತದೆ. ಕೆಎಸ್​ಆರ್​ ಉಪನಗರ ನಿಲ್ದಾಣವನ್ನು ಬಹುಮಾಧ್ಯಮ ಸಾರಿಗೆ ಕೇಂದ್ರವಾಗಿ ರೂಪಿಸುವ ಯೋಜನೆ ಇದ್ದು, ಮೆಟ್ರೋ ಮತ್ತು ಬಸ್​ ನಿಲ್ದಾಣಗಳಿಗೆ ಸ್ಕೈವಾಕ್​ ಹಾಗೂ ಎಸ್ಕಲೇಟರ್​ಗಳ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net