ಬೆಂಗಳೂರು: ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಶಿವಾಜಿನಗರದಲ್ಲಿ ಕಿಡಿಗೇಡಿಗಳಿಂದ ಹಲ್ಲೆಗೊಳಗಾದ ಅಧಿಕಾರಿಗಳನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸನ್ಮಾನಿಸಿದ್ದಾರೆ.
ಕರ್ತವ್ಯನಿಷ್ಠೆಯಿಂದ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ಶುಕ್ರವಾರ ವಿಕಾಸ ಸೌಧದ ತಮ್ಮ ಕಚೇರಿಗೆ ಆಹ್ವಾನಿಸಿ ಗೌರವಿಸಿದ್ದಾರೆ.
ಕಾರ್ಯಾಪಲಕ ಅಭಿಯಂತರ ಆತಿಫ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಾಧವರಾವ್, ಸಾವಿತ್ರಿ, ಸಹಾಯಕ ಅಭಿಯಂತರೆ ರುಚಿತಾ, ಇಂಜಿನಿಯರ್ ಗೌತಮ್, ಜೆಸಿಬಿ ಮಾಲೀಕನ್ನು ಸನ್ಮಾನಿಸಲಾಗಿದೆ.
ಈ ವೇಳೆ ಮಾತನಾಡಿದ ಸಚಿವರು, ಸರ್ಕಾರ ಎಷ್ಟೇ ಯೋಜನೆ ರೂಪಿಸಿದರೂ, ಅದನ್ನು ಜನರಿಗೆ ತಲುಪಿಸಲು ನಿಷ್ಠಾವಂತ ಅಧಿಕಾರಿಗಳೇ ಅಡಿಪಾಯ. ಸಮಾಜಘಾತುಕ ಶಕ್ತಿಗಳ ಜೀವ ಬೆದರಿಕೆಗೂ ಹೆದರದೆ, ಶಿವಾಜಿನಗರದ ಪಾದಚಾರಿ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಮ್ಮ ಜಿಬಿಎ ಯೋಧರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್, ಕೇಂದ್ರ ಪಾಲಿಕೆ ಆಯುಕ್ತ ಜಿ.ಜಗದೀಶ್, ಜಿಬಿಎ&ಪಾಲಿಕೆಗಳ ಅಧಿಕಾರಿ ನೌಕರರ ೇಮಾಭಿವೃದ್ಧಿ ಸಂದ ಅಧ್ಯ ಎ.ಅಮೃತ್ ರಾಜ್ ಉಪಸ್ಥಿತರಿದ್ದರು.