

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಮಹಾನಗರ ನಿವಾಸಿಗಳಿಗೆ ಅನುಕೂಲ ಕಲ್ಪಿಸಲು ಘೋಷಿಸಿದ್ದ 'ಬಿ ಟು ಎ ಖಾತಾ ಅಭಿಯಾನ' ಭಾನುವಾರ ಮುಕ್ತಾಯ ಕಂಡಿದ್ದು, ಮತ್ತಷ್ಟು ಹೆಚ್ಚುವರಿ ಸಮಯ ನಿಗದಿ ಮಾಡುವಂತೆ ಸಾರ್ವಜನಿಕರು ಜಿಬಿಎಅನ್ನು ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ, ಜಿಬಿಎ ಮುಖ್ಯ ಆಯುಕ್ತರು ಸರ್ಕಾರಕ್ಕೆ ಮೌಖಿಕ ಮನವಿ ಮಾಡಿ ಕನಿಷ್ಠ ಒಂದು ತಿಂಗಳು ಕಾಲಾವಕಾಶ ನಿಗದಿ ಮಾಡುವಂತೆ ವಿನಂತಿಸಿದ್ದಾರೆ.