ಅನರ್ಹ ವ್ಯಕ್ತಿಗಳ ಹೊರಗಿಡಲು ಎಸ್​ಐಆರ್​ ಪೂರಕ

ಜಿಬಿಎ
ಜಿಬಿಎ
Published on

ಪ್ರಮುಖ ಮುಖ್ಯಾಂಶಗಳು

  • ಎಂ. ಮಹೇಶ್ವರ ರಾವ್​ ಹೇಳಿಕೆ
  • ಭಾರತೀಯ ಪೌರತ್ವವುಳ್ಳವರಿಗೆಲ್ಲ ಮತದಾನದ ಹಕ್ಕು
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಹೊರದೇಶಗಳಿಂದ ಬಂದು ನೆಲೆಸಿರುವ ಅನರ್ಹ ವ್ಯಕ್ತಿಗಳನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆ ನೆರವಾಗಲಿದೆ. ಆದರೆ ಭಾರತೀಯ ಪೌರತ್ವ ಹೊಂದಿರುವ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಕಲ್ಪಿಸುವುದು ಆಯೋಗದ ಉದ್ದೇಶ ಎಂದು ಜಿಬಿಎ ಮುಖ್ಯ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ. ಮಹೇಶ್ವರ ರಾವ್​ ಹೇಳಿದ್ದಾರೆ.
ಜಿಬಿಎ ಕೇಂದ್ರ ಕಚೇರಿಯಲ್ಲಿ ಎಸ್​ಐಆರ್​ ಸಂಬಂಧ ರಾಜಕೀಯ ಪಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಬುಧವಾರ ಏರ್ಪಡಿಸಿದ್ದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಕಂಡುಬಂದ ವ್ಯತ್ಯಾಸಗಳಿಗೆ ಸಂಬಂಧಿಸಿದಂತೆ ಈಗಾಗಲೇ 26 ಲ ಜನರಿಗೆ ನೋಟಿಸ್​ ನೀಡಲಾಗಿದೆ. ಇವುಗಳ ಇತ್ಯರ್ಥಕ್ಕಾಗಿ 76 ಎಇಆರ್​ಒಗಳು ಹಾಗೂ 1,200 ಹೆಚ್ಚುವರಿ ಎಇಆರ್​ಒಗಳು ಸೇರಿ ಒಟ್ಟು 1,300 ಗ್ರೂಪ್​ "ಎ' ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ಕಚೇರಿಗಳಲ್ಲಿ ಬ್ಯಾಚ್​ಗಳ ಆಧಾರದ ಮೇಲೆ ದಾಖಲೆಗಳ ಪರಿಶೀಲನೆ ಮತ್ತು ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.
ಸುಮಾರು 6 ರಿಂದ 6.5 ಲ ಪ್ರಕರಣಗಳಲ್ಲಿ ಪಾಲಕರು ಮತ್ತು ಮಕ್ಕಳ ವಯಸ್ಸಿನ ವ್ಯತ್ಯಾಸ, ಹೆಸರಿನ ಅರ ದೋಷ ಹಾಗೂ ನಮೂನೆಗಳಲ್ಲಿನ ತಾಂತ್ರಿಕ ಅಸಮಾನತೆಗಳು ಕಂಡುಬಂದಿವೆ. ಹನುಮಂತನಗರದ ಗಾಳಿ ಆಂಜನೇಯ ಸ್ವಾಮಿ ದೇವಾಲಯದ ವಾರ್ಡ್​ನಲ್ಲಿ 700 ಮತದಾರರನ್ನು "ಸ್ಥಳಾಂತರಗೊಂಡವರು' ಎಂದು ಗುರುತಿಸಿರುವ ಬಗ್ಗೆ ಸ್ಪಷ್ಟನೆ ನೀಡಿದ ಮಹೇಶ್ವರ್​ ರಾವ್​, ರಾಜಕೀಯ ಪಗಳ ಏಜೆಂಟರ ಸಮ್ಮುಖದಲ್ಲಿ ಪಂಚನಾಮೆ ಮತ್ತು ಪರಿಶೀಲನೆ ನಡೆಸಿಯೇ ಈ ಪಟ್ಟಿ ಪ್ರಕಟಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬೂತ್​ ಮಟ್ಟದ ಸಮಸ್ಯೆಗಳನ್ನು ಪರಿಹರಿಸಲು ಎಡಿಒಗಳು ವಿಶೆಷ ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ. ಮನೆಯಿಂದ ಹೊರಬರಲಾಗದ ಹಿರಿಯ ನಾಗರಿಕರು, ಗಂಭೀರ ಅನಾರೋಗ್ಯಪಿಡಿತರು, ಗಾಲಿಕುರ್ಚಿ ಅವಲಂಬಿತರು ವಿಚಾರಣೆಗೆ ಕಚೇರಿಗೆ ಬರುವುದು ಕಡ್ಡಾಯವಲ್ಲ. ಅವರ ಪರವಾಗಿ ಕುಟುಂಬ ಸದಸ್ಯರು ಅಥವಾ ಬಿಎಲ್​ಎ ಅಥವಾ ಬಿಎಲ್​ಒಗಳ ಮೂಲಕ ಮಾಹಿತಿ ನೀಡಬಹುದು. ಇಲ್ಲವೇ ಅಧಿಕಾರಿಗಳೇ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಸಿ.ಎನ್​.ಆರ್​. ರಾವ್​ಗೆ ನೋಟಿಸ್​ ನೀಡಿಲ್ಲ
"ಭಾರತ ರತ್ನ' ಪುರಸತ ಹಿರಿಯ ವಿಜ್ಞಾನಿ ಪ್ರೊ. ಸಿ.ಎನ್​.ಆರ್​. ರಾವ್​ ಅವರಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಯಾವುದೇ ನೋಟಿಸ್​ ಜಾರಿ ಮಾಡಿಲ್ಲ ಎಂದು ಮಹೇಶ್ವರ ರಾವ್​ ಸ್ಪಷ್ಟಪಡಿಸಿದರು.  ಮತದಾರರ ಪಟ್ಟಿಯಲ್ಲಿನ ಹೆಸರಿನ ವ್ಯತ್ಯಾಸದ ಹಿನ್ನೆಲೆಯಲ್ಲಿ ರಾವ್​ ಹಾಗೂ ಕುಟುಂಬ ಸದಸ್ಯರಿಗೆ ಮನೆಗೆ ತೆರಳಿ ಗಣತಿ ನಮೂನೆಗಳನ್ನು ನೀಡಿ, ಅಗತ್ಯ ಮಾಹಿತಿ ಭರ್ತಿ ಮಾಡಲಾಗಿದೆ. 2002ರ ಮತದಾರರ ಪಟ್ಟಿಯಲ್ಲಿ "ರಾಮ' ಎಂಬ ಹೆಸರಿದ್ದರೆ, ಪ್ರಸ್ತುತ ಪಟ್ಟಿಯಲ್ಲಿ ಪ್ರೊ. ಸಿ.ಎನ್​. ರಾವ್​ ಎಂ. ಎಂದು ನೋಂದಣಿಯಾಗಿದೆ. ಹೆಸರಿನ ವ್ಯತ್ಯಾಸ ಹಿನ್ನೆಲೆಯಲ್ಲಿ ಬೂತ್​ ಮಟ್ಟದ ಅಧಿಕಾರಿ (ಬಿಎಲ್​ಒ) ಯಾವುದೇ ನೋಟಿಸ್​ ನೀಡದೆ, ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಶಿಫಾರಸು ಮಾಡಿದ್ದಾರೆ. ಅದರಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಹಿರಿಯ ನಟ ಶಿವರಾಜ್​ ಕುಮಾರ್​ ಪ್ರಕರಣವನ್ನು ಬಗೆಹರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಮುಖ್ಯಾಂಶಗಳು

* ಸೆ. 19 ಮತ್ತು 20 ರಂದು ಮತಗಟ್ಟೆಗಳು, ವಾರ್ಡ್​ ಹಾಗೂ ತಾಲೂಕು ಕಚೇರಿಗಳಲ್ಲಿ ವಿಶೇಷ ಕ್ಯಾಂಪ್​ ಆಯೋಜನೆ.
* ಬೂತ್​ ಮಟ್ಟದ ಸಮಸ್ಯೆಗಳನ್ನು ಶ್ರೀದಲ್ಲೆ ಸಹಾಯವಾಣಿ ನೀಡುವ ಮೂಲಕ ಸ್ಪಂದಿಸಲಾಗುವುದು.
* ಆಯೋಗ ಸೂಚಿಸಿರುವ 11 ದಾಖಲೆಗಳನ್ನು ಪರಿಶೀಲಿಸಲಾಗುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net