ಉತ್ತರ ಪಾಲಿಕೆಯ ಬಿಎಲ್‌ಒ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಅನ್ಬುಕುಮಾರ್ ಅವರು ವಾಸವಿರುವ ಜಕ್ಕೂರಿನ ನಿವಾಸಕ್ಕೆ ತೆರಳಿ ನಮೂನೆ ವಿತರಿಸಿದರು. ಇದೇ ರೀತಿ ನಗರದ ವಿವಿಧೆಡೆ ಗಣ್ಯ ಮತದಾರರ ಮನೆಗಳಿಗೆ ತೆರಲಿ ಗಣತಿ ಾರಂ ಹಸ್ತಾಂತರಿಸಿದರು. ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್, ನಟಿ ಭಾರತಿ, ವಿಶ್ರಾಂತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ಕಲಾವಿದರಾದ ಸಿಹಿ ಕಹಿ ಚಂದ್ರು, ಸುಂದರರಾಜ್ ಹಾಗೂ ಇತರರ ನಿವಾಸಕ್ಕೆ ಬಿಎಲ್‌ಒಗಳು ಖುದ್ದು ತೆರಳಿದ್ದು, ಭರ್ತಿ ಮಾಡಿದ ಫಾರಂಗಳನ್ನು ಮತ್ತೊಂದು ಸುತ್ತಿನ ಭೇಟಿ ವೇಳೆ ಹಿಂದಿರುಗಿಸುವಂತೆ ಮಾಹಿತಿ ನೀಡಿ ವಾಪಸಾದರು.