ನಗರದ ಅಭಿವೃದ್ಧಿ ಎಂದರೆ ಕೇವಲ ಫುಟ್ಪಾತ್ಗಳನ್ನು ತೆರವುಗೊಳಿಸುವುದಲ್ಲ. ಇಂದಿನ ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳ ಜಾಗವನ್ನು ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು, ವಿದ್ಯುತ್ ಕಂಬಗಳು, ಜಂಕ್ಷನ್ ಬಾಕ್ಸ್ಗಳು, ಜಾಹೀರಾತು ಫಲಕಗಳು, ಕೇಬಲ್ ಬಾಕ್ಸ್ಗಳು, ಅನಧಿಕೃತ ವಾಹನ ನಿಲುಗಡೆ, ರಸ್ತೆಬದಿ ನಿಮಾರ್ಣ ಸಾಮಗ್ರಿಗಳು ಕೂಡ ಆಕ್ರಮಿಸಿಕೊಂಡಿವೆ. ಹಲವೆಡೆ ಪಾದಚಾರಿ ಮಾರ್ಗವೇ ಅಪೂರ್ಣವಾಗಿದ್ದು, ಕೆಲವೆಡೆ ಮಧ್ಯದಲ್ಲೇ ಕೊನೆಗೊಳ್ಳುತ್ತದೆ. ಇಂತಹ ಮೂಲಸೌಕರ್ಯ ಸಮಸ್ಯೆಗಳನ್ನು ಬಗೆಹರಿಸದೆ ಕೇವಲ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವುದರಿಂದ ಪಾದಚಾರಿಗಳಿಗೆ ಸಂಪೂರ್ಣ ಅನುಕೂಲ ಸಿಗುವುದಿಲ್ಲ. ನಗರದಲ್ಲಿ ಪಾದಚಾರಿಸ್ನೇಹಿ ವಾತಾವರಣ ನಿಮಾರ್ಣವಾಗಬೇಕಾದರೆ ಎಲ್ಲ ರೀತಿಯ ಅಡೆತಡೆಗಳನ್ನು ಸಮಾನವಾಗಿ ತೆರವುಗೊಳಿಸಬೇಕು. ಯೋಜಿತ ಪಾದಚಾರಿ ಮಾರ್ಗ, ವೈಜ್ಞಾನಿಕ ಪಾರ್ಕಿಂಗ್ ವ್ಯವಸ್ಥೆ, ಬೀದಿ ವ್ಯಾಪಾರಿಗಳಿಗೆ ಗುರುತಿಸಲಾದ ವಲಯಗಳು ಹಾಗೂ ಕಟ್ಟಡ ನಿಯಮ ಉಲ್ಲಂಘನೆಗಳ ವಿರುದ್ಧ ನಿರಂತರ ಕಾರ್ಯಾಚರಣೆ ಕೈಗೊಂಡಾಗ ಮಾತ್ರ ನಗರದ ಸೌಂದರ್ಯ ಮತ್ತು ಸಾರ್ವಜನಿಕರ ಹಿತಾಸಕ್ತಿ ಎರಡನ್ನೂ ಸಮತೋಲನದಲ್ಲಿ ಕಾಪಾಡಲು ಸಾಧ್ಯವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.