ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಒತ್ತುವರಿ ಪ್ರಕರಣಗಳಿದ್ದು, ಈ ಭಾಗದಲ್ಲಿ ಹೆಚ್ಚಿನ ಗಮನ ಕೇಂದ್ರೀಕರಿಸಿರುವ ಜಿಬಿಎ, ಶಿವಾಜಿನಗರದ ಜನಿಬಿಡ ಸ್ಥಳಗಳಲ್ಲಿ ಸಾರ್ವಜನಿಕರು ಫುಟ್‌ಪಾತ್‌ಗಳಲ್ಲಿ ಸರಾಗವಾಗಿ ಓಡಾಡಲು ಅವಕಾಶ ಕಲ್ಪಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ 14 ರಸ್ತೆಗಳಲ್ಲಿ ಒಟ್ಟು 10.53 ಕಿ.ಮೀ. ಉದ್ದ ಫುಟ್‌ಪಾತ್ ಒತ್ತುವರಿಯನ್ನು ತೆರವುಗೊಳಿಸಲಾಯಿತು. ಇದಕ್ಕಾಗಿ 60 ಕಾರ್ಮಿಕರು, 4 ಜೆಸಿಬಿ, 6 ಟ್ರ್ಯಾಕ್ಟರ್ ಹಾಗೂ 4 ಟಿಪ್ಪರ್‌ಗಳನ್ನು ಬಳಸಿಕೊಳ್ಳಲಾಯಿತು. ಈ ವೇಳೆ 13 ತಳ್ಳುವ ಗಾಡಿಗಳು, 1 ಪೆಟ್ಟಿ ಅಂಗಡಿ, 16 ಕ್ಯಾನೋಪಿಗಳು, 7 ತಾತ್ಕಾಲಿಕ ಶೆಡ್, 15 ಮೆಟ್ಟಿಲುಗಳು ಹಾಗೂ 26 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.