ಆನೇಕಲ್ ತಾಲೂಕು ಖಾಸಗಿ ಶಾಲೆಗಳ ಒಕ್ಕೂಟದಿಂದ ಅತ್ತಿಬೆಲೆಯ ಸೇಂಟ್ ಫಿಲೋಮಿನಾಸ್ ಆವರಣದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, 6ನೇ ವಾರ್ಷಿಕೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗೆ ಹಾಜರಾಗುವ ಮಗುವಿಗೆ ಪ್ರತಿ ದಿನ 1 ರೂ. ಪ್ರೋತ್ಸಾಹ ಧನ ನೀಡುವ ಮೂಲಕ ಶಾಲೆಯತ್ತ ಆಕರ್ಷಿಸಲಾಗುತ್ತಿದೆ. "ಶಿಕ್ಷಕರ ಪ್ರಶಸ್ತಿಗೆ ಖಾಸಗಿ ಶಾಲಾ ಶಿಕ್ಷಕರನ್ನು ಪರಿಗಣಿಸಬೇಕು, ಪಠ್ಯಪುಸ್ತಕ ವಿತರಣೆ, ಶಾಲಾ ಸಮಯ ಬದಲಾವಣೆ' ಕುರಿತು ಬೇಡಿಕೆ ಬಂದಿದ್ದು, ಆ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.