ಮಾನವೀಯತೆ ರೂಢಿಸಿಕೊಳ್ಳಲು ನಾಟಕ ಸಹಕಾರಿ

ನಗರದ ಕೆಂಗುಂಟೆಯಲ್ಲಿ ಹಮ್ಮಿಕೊಂಡಿದ್ದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ ಮಾತನಾಡಿದರು. ಕಲಾವಿಧ ಎಂ.ಮಂಜುನಾಥ್​, ದೇವಾಲಯದ ಅಧ್ಯಕ್ಷ ಶ್ರೀನಿವಾಸ್​, ಯೋಗೇಶ್​, ಮುರಳಿ, ರಾಜಕುಮಾರಿ ಇದ್ದರು.
ನಗರದ ಕೆಂಗುಂಟೆಯಲ್ಲಿ ಹಮ್ಮಿಕೊಂಡಿದ್ದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ ಮಾತನಾಡಿದರು. ಕಲಾವಿಧ ಎಂ.ಮಂಜುನಾಥ್​, ದೇವಾಲಯದ ಅಧ್ಯಕ್ಷ ಶ್ರೀನಿವಾಸ್​, ಯೋಗೇಶ್​, ಮುರಳಿ, ರಾಜಕುಮಾರಿ ಇದ್ದರು.
Published on
ಬೆಂಗಳೂರು: ರಂಗಭೂಮಿ ಜೀವನದ ಮುಖ್ಯ ಭಾಗ, ಮಾನವೀಯತೆ, ಸಂಸ್ಕಾರವನ್ನು ಜೀವನದಲ್ಲಿ ರೂಢಿಸಿಕೊಳ್ಳಲು ಪೌರಾಣಿಕ ನಾಟಕಗಳು ಸಹಕಾರಿ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.
ನಗರದ ಕೆಂಗುಂಟೆಯಲ್ಲಿ ಹಿರಿಯ ರಂಗಭೂಮಿ ಕಲಾವಿದ ದಿವಂಗತ ಮುನಿವೆಂಕಟಪ್ಪ (ತಮ್ಮಯ್ಯಣ್ಣ) ಅವರ ನೆನಪಿನಾರ್ಥವಾಗಿ ಹಮ್ಮಿಕೊಂಡಿದ್ದಮ, ಕುರುಕ್ಷೇತ್ರ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮಗಳಿಂದ ಮಾತ್ರ ರಂಗಭೂಮಿ ಸಾಹಿತ್ಯವು ಶ್ರೀಮಂತವಾಗಿ ಉಳಿಯಲು ಸಾಧ್ಯವಾಗಿದೆ ಎಂದರು.
ರಂಗಭೂಮಿಯಲ್ಲಿ ಸತ್ಯ, ನ್ಯಾಯ, ಸಂಸತಿ, ಭಕ್ತಿ, ಒಳಿತನ್ನು ಕಲಿಸುವ ನಾಟಕಗಳಿವೆ. ಹಿಂದೆ ಗ್ರಾಮೀಣ ಭಾಗದ ಜನರು ಇಂತಹ ನಾಟಗಳನ್ನು ನೋಡುವ ಮೂಲಕ ಒತ್ತಡಗಳನ್ನು ಮರೆತು ನೆಮ್ಮದಿಯನ್ನು ಬದುಕು ಕಂಡುಕೊಳ್ಳುತ್ತಿದ್ದರು. ಇಂತಹ ನಾಟಕಗಳನ್ನು ಉಳಿಸಿಕೊಂಡು ಬರುತ್ತಿರುವ ಕಲಾವಿದರಿಗೆ ಬೆಂಬಲ ನೀಡುವ ಅಗತ್ಯವಿದ್ದು, ಹೆಚ್ಚು ಹೆಚ್ಚು ನಾಟಕ ಪ್ರದರ್ಶನ ಆಗಬೇಕು ಎಂದು ತಿಳಿಸಿದರು.
ರಂಗಭೂಮಿ ಕಲಾವಿದ ಎಂ.ಮಂಜುನಾಥ್​ ಮಾತನಾಡಿ, ರಂಗ ಭೂಮಿ ಎಲ್ಲಾ ಕಲಾ ಪ್ರಕಾರಗಳಿಗೆ ಮಾತೃ ಇದ್ದಂತೆ. ನಟನೆ, ನೃತ್ಯ, ಹಡುಗಾರಿಕೆ, ಹಾಸ್ಯ ಎಲ್ಲದರ ಮೂಲ ರಂಗಭೂಮಿ. ಡಾ.ರಾಜ್​ ಕುಮಾರ್​ ಸೇರಿ ಮೇರು ನಟರು ರಂಗಭೂಮಿ ಹಿನ್ನಲೆಯಿಂದಲೇ ಬಂದು ನಟರಾಗಿ ವಿಶ್ವಖ್ಯಾತಿ ಪಡೆದಿದ್ದಾರೆ ಎಂದು ತಿಳಿಸಿದರು.
ಈ ಮೊದಲು ಜನರು ಮನರಂನೆಗಾಗಿ ನಾಟಗಳನ್ನು ನೋಡುತ್ತಿದ್ದರು. ಆದರೆ ಈಗಿನ ಮನರಂಜನಾ ಮಾಧ್ಯಮಗಳು ಯುವಕರ ಮೇಲೆ ಪ್ರಭಾವ ಬೀರುತ್ತಿವೆ. ಈಗಲೂ ಸಹ ರಂಗಭೂಮಿ ತನ್ನದೆ ಆದ ಮಹತ್ವ ಉಳಿಸಿಕೊಂಡಿ ಬಂದಿದೆ ಎಂದರು.
ಕಾಮಾಕ್ಷಿಪಾಳ್ಯ, ಮಲ್ಲತ್ತಹಳ್ಳಿ, ನಾಗರಭಾವಿ, ಕೊಟ್ಟಿಗೆಪಾಳ್ಯ, ತಾವರೆಕೆರೆ, ಯಶವಂತಪುರ ಪ್ರದೇಶಗಳು ರಂಗಭೂಮಿ ತವರಾಗಿದ್ದು, ಅತ್ಯುತ್ತಮ ಕಲಾವಿದರೂ ಇಲ್ಲಿದ್ದಾರೆ. ಆದರೂ ಇಲ್ಲಿ ರಂಗಭೂಮಿ ಚಟುವಟಿಕೆಗೆ ಪ್ರೇಕ್ಷಕರ, ಪ್ರೋತ್ಸಾಹದ ಕೊರತೆಯಿದೆ. ಯುವ ಜನರು ಸಿನಿಮಾ, ಸಾಮಾಜಿಕ ಜಾಲತಾಣ, ಮೊಬೈಲ್​ಗೆ ಮಾರು ಹೋಗಿದ್ದು ಪೌರಾಣಿಕ ನಾಟಕಗಳು ಮರೆಯಾಗುತ್ತಿವೆ ಎಂದು ವಿಷಾಧಿಸಿದರು.
ಜ್ಞಾನ ಭಾರತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ರಾಜ ಕುಮಾರಿ, ಕೆಂಗುಂಟೆ ಲಕ್ಷಿ$್ಮ ವೆಂಕಟೇಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀನಿವಾಸ್​, ಯೋಗೇಶ್​, ಮುರಳಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net