ಫೆಬ್ರವರಿ ಅಂತ್ಯದೊಳಗೆ ಡಬಲ್​ ಡೆಕ್ಕರ್​ ಸಂಚಾರಮುಕ್ತ! | double decker

ಡಬಲ್ ಡೆಕರ್
ಡಬಲ್ ಡೆಕರ್
Published on

ಪ್ರಮುಖ ಮುಖ್ಯಾಂಶಗಳು

  • 449 ಕೋಟಿ ರೂ. ವೆಚ್ಚದ ಯೋಜನೆ
 ಬೆಂಗಳೂರು: "ರಾಜಧಾನಿಯ ಮೊದಲ ಡಬಲ್​ ಡೆಕ್ಕರ್​ ಮೇಲ್ಸೇತುವೆ' ಖ್ಯಾತಿ ಪಡೆದ ನಗರದ ಸಿಲ್ಕ್​ಬೋರ್ಡ್​ ಜಂಕ್ಷನ್​ನಲ್ಲಿರುವ ಫ್ಲೈಓವರ್​ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು,ಫೆಬ್ರವರಿ ಅಂತ್ಯದೊಳಗೆ ಸಂಪೂರ್ಣ ಸಂಚಾರಮುಕ್ತವಾಗುವ ನಿರೀೆ ಇದೆ.
ನಗರದ ಸಂಚಾರ ಸಿಕ್ಕಿನ ಸಮಸ್ಯೆಯನ್ನು ಕಡಿಮೆಗೊಳಿಸವ ನಿಟ್ಟಿನಲ್ಲಿ 449 ಕೋಟಿ ರೂ. ವೆಚ್ಚದ ಈ ಯೋಜನೆಯ ಶ್ರೀ ಕಾರ್ಯಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಇದು ಸೆಂಟ್ರಲ್​ ಸಿಲ್ಕ್​ಬೋರ್ಡ್​ ಜಂಕ್ಷನ್​ನಿಂದ ಬಿಟಿಎಂ ಲೇಔಟ್​, ಎಚ್​ಎಸ್​ಆರ್​ ಲೇಔಟ್​ ಮತ್ತು ಬೆಳ್ಳಂದೂರುವರೆಗಿನ ಸಂಚಾರ ಸಿಕ್ಕಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಿದೆ.
2024ರಲ್ಲೇ ಮೇಲ್ಸೇತುವೆಯ ಒಂದು ಬದಿಯ ಭಾಗ ತೆರೆದಿತ್ತು. ಆದರೆ ಅಸ್ತಿತ್ವದಲ್ಲಿರುವ ರಸ್ತೆ ಮಾರ್ಗದ ಮೇಲೆ 42 ಮೀಟರ್​ ಉಕ್ಕಿನ ಸೇತುವೆಯನ್ನು ಅಳವಡಿಸಿದ್ದರಿಂದ ಒಂದು ಭಾಗ ವಿಳಂಬವಾಗಿತ್ತು. ಕಾರ್ಮಿಕರು ಈಗ ಕಾಂಕ್ರೀಟ್​ ಚಪ್ಪಡಿ ಹಾಕುವ ಕೆಲಸವನ್ನು ಪೂರ್ಣಗೊಳಿಸುತ್ತಿದ್ದಾರೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಅಧಿಕಾರಿಗಳು ಫೆಬ್ರವರಿ ಅಂತ್ಯದ ವೇಳೆಗೆ ಸಿವಿಲ್​ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದಾರೆ.
ಕಾಮಗಾರಿ ಬಹುತೇಕ ಪೂರ್ಣ
ಎಚ್​ಎಸ್​ಆರ್​ ಲೇಔಟ್​ ಅನ್ನು ಬಿಟಿಎಂ ಲೇಔಟ್​ ಜತೆ ಸಂಪರ್ಕಿಸುವ ಮೇಲ್ಸೇತುವೆ, ಸ್ಟೀಲ್​ ಗಿರ್ಡರ್​ ಅಳವಡಿಸುವಲ್ಲಿ ವಿಳಂಬವನ್ನು ಎದುರಿಸಿತ್ತು. ಸದ್ಯ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಶ್ರೀ ಉದ್ಘಾಟನೆಯ ದಿನಾಂಕ ಘೋಷಣೆಯಾಗಲಿದೆ. ಕೆಲವು ಪರಿಶೀಲನೆಗಳು ಬಾಕಿ ಇದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ತಿಳಿಸಿದ್ದಾರೆ. ಗುತ್ತಿಗೆದಾರರು ಫೈನಲ್​ಟಚ್​ ನೀಡಿದ ನಂತರ, ಸಂಚಾರ ಪೊಲೀಸರು ಸಾರ್ವಜನಿಕರಿಗೆ ಸಂಚಾರಮುಕ್ತ ಮಾಡುವ ಮೊದಲು ರಚನೆಯನ್ನು ಪರಿಶೀಲಿಸುತ್ತಾರೆ ತಿಳಿಸಿದ್ದಾರೆ. ಫೆಬ್ರವರಿ ಅಂತ್ಯದ ವೇಳೆಗೆ ಕಾಮಗಾರಿ, ಪರಿಶೀಲನೆ ಎಲ್ಲವೂ ಮುಗಿಯಲಿದ್ದು, ನಗರದ ಮೊದಲ ಡಬಲ್​ ಡೆಕ್ಕರ್​ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net