ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಸೇರಿದ 50 ಸ್ಥಳಗಳಲ್ಲಿ ಅಭಿಯಾನ ನಡೆಯುತ್ತಿದೆ. ಶನಿವಾರ ನಡೆದ ಅಭಿಯಾನದಲ್ಲಿ ಇ-ಖಾತಾ, ಮ್ಯುಟೆಷನ್, ತಿದ್ದುಪಡಿ, ಹೊಸ ಇ-ಖಾತಾ, ಬಿ ಟು ಎ ಖಾತಾ ಹಾಗೂ ದೂರುಗಳ ಅರ್ಜಿಗಳು ಸೇರಿ ಇತರ ವಿಷಯಗಳಿಗಾಗಿ 1,206 ಮಂದಿ ಭೇಟಿ ನೀಡಿದರು. ಈ ಪೈಕಿ ಸ್ಥಳದಲ್ಲಿಯೇ 802 ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.