ರಾಜ್ಯದಲ್ಲಿ ಶೇ.33 ಇರಬೇಕಾದ ಅರಣ್ಯ ಪ್ರದೇಶ 21.22 ಮಾತ್ರ ಇದೆ. ಈ ಕೊರತೆ ನೀಗಿಸಲು ಆದ್ಯತೆ ನೀಡಲಾಗುವುದು ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಅರಣ್ಯ ಸಂರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರ ಹೋರಾಟದ ಲವಾಗಿ ಸಂಪತ್ತು ಉಳಿದುಕೊಂಡಿದೆ. ಇದುವರೆಗೂ 65 ಅಧಿಕಾರಿ, ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ನಾವೆಲ್ಲ ಅರಣ್ಯ ಉಳಿಸಲು ಶ್ರಮಿಸಬೇಕು. "ತೇಗದ ಸಿರಿ' ಯೋಜನೆಯನ್ನು ಸರ್ಕಾರ ಘೋಷಿಸಿದ್ದು, ರಸ್ತೆ ಬದಿ, ಸರ್ಕಾರಿ ಖಾಲಿ ಜಾಗಳಲ್ಲಿ ತೇಗ ತಳಿ ಸಸಿಗಳನ್ನು ನಾಟಿ ಮಾಡಿ ಪೋಷಿಸಲು ಪ್ರೋತ್ಸಾಹ ನೀಡಲಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಬೇಕು ಎಂದರು.