ಮೇ 16ರಂದು ಆರಂಭವಾದ ಈ ಆ್ಯಪ್ ಕೇವಲ ಮೂರು ದಿನಗಳಲ್ಲಿ 5 ಸಾವಿರಕ್ಕೂ ಅಧಿಕ ಡೌನ್ಲೋಡ್ಗಳನ್ನು ದಾಖಲಿಸಿದ್ದು, ಸುಮಾರು 500ಕ್ಕೂ ಹೆಚ್ಚು ಬುಕಿಂಗ್ಗಳು ಬಂದಿತ್ತು. ಇದುವರೆಗೆ ಸುಮಾರು 15 ಸಾವಿರ ಮಂದಿ ಆ್ಯಪ್ ಡೌನ್ಲೋಡ್ ಮಾಡಿದ್ದು, ಹಳೆಯ ಸೋಫಾ, ಹಾಸಿಗೆ, ಮಂಚ, ಫ್ರಿಜ್, ವಾಷಿಂಗ್ ಮಷಿನ್, ಬಟ್ಟೆ ಸೇರಿ ದೊಡ್ಡ ಗಾತ್ರದ ಗೃಹ ತ್ಯಾಜ್ಯವನ್ನು ಉಚಿತವಾಗಿ ಮನೆ ಬಾಗಿಲಿನಿಂದಲೇ ಸಂಗ್ರಹಿಸುವ ವ್ಯವಸ್ಥೆಗೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದರು. ಆದರೆ, ಸಂಸ್ಥೆಯಿಂದ ಸರಿಯಾದ ಸ್ಪಂದನೆ ಲಭಿಸದ ಹಿನ್ನೆಲೆಯಲ್ಲಿ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.