ಸರ್ಕಾರದ ವಿವಿಧ ಅನುದಾನದಡಿ 14 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
ಮೂರಂತಸ್ತಿನ ಡಾ. ಪುನೀತ್ ರಾಜಕುಮಾರ್ ಆಡಿಟೋರಿಯಂ ಜನಬಳಕೆಗೆ ಸಿದ್ಧ
ಬೆಂಗಳೂರು: ನಗರದಲ್ಲಿ ಕಲ್ಯಾಣ ಮಂಟಪಗಳ ಬಾಡಿಗೆ ದರವು ದುಬಾರಿಯಾಗಿದ್ದು, ಮಧ್ಯಮ ಹಾಗೂ ಬಡ ವರ್ಗದ ಕುಟುಂಬಗಳ ಸದಸ್ಯರ ವಿವಾಹ, ನಿಶ್ಚಿತಾರ್ಥ, ಆರತಕ್ಷತೆಗಳಂತಹ ಶುಭಕಾರ್ಯಗಳನ್ನು ನೆರವೇರಿಸಲು ಬಹಳ ಕಷ್ಟದ ಸ್ಥಿತಿ ಇದೆ.
ಸವಾರಂಭಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ವೈಭವೋಪೇತವಾದ ಕಲ್ಯಾಣ ಮಂಟಪಗಳಲ್ಲಿ ನೆರವೇರಿಸಲು ಅನುಕೂಲ ಮಾಡುವ ಉದ್ದೇಶದಿಂದ ಯಡಿಯೂರು ಕೆರೆಯ ಮುಂಭಾಗ ಸಂಪೂರ್ಣ ಹವಾನಿಯಂತ್ರಿತ ‘ಅ.ನ.ಕೃ. ಕನ್ವೆನ್ಷನ್ ಸೆಂಟರ್ ಹಾಗೂ ‘ಡಾ. ಪುನೀತ್ ರಾಜಕುವಾರ್ ಆಡಿಟೋರಿಯಂ’ ಅನ್ನು ಪಾಲಿಕೆಯ ವತಿಯಿಂದ ನಿರ್ಮಿಸಲಾಗಿದೆ. ಎರಡೂ ಕಟ್ಟಡಗಳು ಒಟ್ಟು 58 ಸಾವಿರ ಚದರ ಅಡಿಗಳ ವಿಸ್ತೀರ್ಣವಿದ್ದು, 7 ಮಹಡಿಗಳನ್ನು ಹೊಂದಿದೆ. ಈ ಕಟ್ಟಡಕ್ಕಾಗಿ ಒಟ್ಟು 14 ಕೋಟಿ ರೂ. ಅನುದಾನವನ್ನು ವಿವಿಧ ಬಾಬ್ತಿನಡಿ ಕ್ರೋಡೀಕರಿಸಿ ಬಳಕೆ ಮಾಡಿಕೊಳ್ಳಲಾಗಿದೆ.
ಸೋಮವಾರ (ಜೂ.22) ಬೆಳಗ್ಗೆ 10.30ಕ್ಕೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ ಹಾಗೂ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುವಾರ್ ಅವರು ಎರಡೂ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ತಿಳಿಸಿದ್ದಾರೆ.