ಕಾಂಗ್ರೆಸ್​ ನಮ್ಮ ನಂಬಿಕೆ, ದೇವಾಲಯ

ಪ್ರದಿಪ್​ ಈಶ್ವರ್​
ಪ್ರದಿಪ್​ ಈಶ್ವರ್​
Published on
ಬೆಂಗಳೂರು: ಕಾಂಗ್ರೆಸ್​ ಕೇವಲ ರಾಜಕೀಯ ಪಕ್ಷವಲ್ಲ. ನಮ್ಮ ನಂಬಿಕೆ ಮತ್ತು ದೇವಾಲಯ. ಮುಂದಿನ ಚುನಾವಣೆಗಳಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬರಲು ಹಗಲಿರುಳು ಶ್ರಮಿಸಲಾಗುವುದು ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದಿಪ್​ ಈಶ್ವರ್​ ಹೇಳಿದ್ದಾರೆ.
ತಮ್ಮ ಎಕ್ಸ್​ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ನಾನು ಕಾಂಗ್ರೆಸ್​ ನಿಷ್ಠಾವಂತ ಕಾರ್ಯಕರ್ತ, ಬಹಳ ಕೆಳಮಟ್ಟದಿಂದ ಬೆಳೆದು ಬಂದಿದ್ದು, ಸಿದ್ದಾಂತಕ್ಕೆ ಬದ್ಧನಾಗಿರುತ್ತೇನೆ. ಎರಡನೇ ಅವಧಿಯಲ್ಲಿ ಸಚಿವ ಸ್ಥಾನ ಕಲ್ಪಿಸಬೇಕು ಎಂದು ಬೇಡಿಕೆ ಇಟ್ಟಿದ್ದೆ. ಹೈಕಮಾಂಡ್​ ಸಹ ಯುವಕರಿಗೆ ಆದ್ಯತೆ ನೀಡುವ ಭರವಸೆ ನೀಡಿದ್ದರು. ಆದರೆ ಬೇಕೆ ಬೇಕು ಎಂಬ ಹಠವಿಲ್ಲ. ರಾಜಕೀಯದಲ್ಲಿ ಬದಲಾವಣೆಗಳು ಸಹಜ ಎಂದಿದ್ದಾರೆ.
ಮುಂದಿನ 2028ಕ್ಕೆ ರಾಜ್ಯ ಹಾಗೂ 2029ರ ಚುನಾವಣೆಯಲ್ಲಿ ರಾಹುಲ್​ ಗಾಂಧಿ ಅವರನ್ನು ಪ್ರಧಾನಿಯಾಗಿ ಮಾಡುವುದು ನಮ್ಮ ಗುರಿ. ಇದಕ್ಕಾಗಿ ಅವಕಾಶಗಳಿದ್ದು ಪಕ್ಷ$ವನ್ನು ಸಂಟಿಸುವ ಜತೆಗೆ ಅಧಿಕಾರಕ್ಕೆ ಬರಲು ಸತತವಾಗಿ ಶ್ರಮಿಸಲಾಗುವುದು. ಕೆ.ಎಚ್​.ಮುನಿಯಪ್ಪ ಮೂಲತ@ ಚಿಕ್ಕಬಳ್ಳಾಪುರ ಜಿಲ್ಲೆಯವರಾಗಿದ್ದರೂ ಕೋಲಾರವನ್ನು ಪ್ರತಿನಿಧಿಸುತ್ತಿದ್ದರು. ಅವರಿಗೆ ಸಚಿವ ಸ್ಥಾನ ಸಿಕ್ಕಿರುವ ಕಾರಣ ಕೋಲಾರಕ್ಕೆ ಅವಕಾಶ ಸಿಕ್ಕಿಲ್ಲ ಅಂತ ಯಾಕೆ ಅಂದುಕೊಳ್ಳಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಚಿವರಾಗಿದ್ದರಲ್ಲವೇ? ಮೊದಲ ಅವಧಿಯಲ್ಲಿ ಡಾ.ಎಂ.ಸಿ.ಸುಧಾಕರ್​ ಅವರಿಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ನೀಡಲಾಗಿತ್ತು. ಈಗ ಕೈ ತಪ್ಪಿದ್ದರೂ 2028ಕ್ಕೆ ಅವಕಾಶ ಸಿಗುತ್ತದೆ. ಸಚಿವ ಸ್ಥಾನ ಸಿಗದ ಮಾತ್ರಕ್ಕೆ ಯಾರು ಸಹ ರಾಜೀನಾಮೆ ನೀಡುವುದಿಲ್ಲ ಎಂಬ ನಂಬಿಕೆಯಿದೆ. ನಮಗೆ ಪಕ್ಷದ ಸಿದ್ದಾಂತ ದೊಡ್ಡದು. ನಮ್ಮ ಗುರಿ ಏನಿದ್ದರೂ ಚುನಾವಣೆಯತ್ತ ಎಂದು ಬರೆದುಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net